USA: ಎಚ್-1ಬಿ ವೀಸಾ ದರವನ್ನು ಹೆಚ್ಚಿಸುವ ಮೂಲಕ ಭಾರತೀಯರ ಪಾಲಿಗೆ ದುಃಸ್ವಪ್ನವಾಗಿದ್ದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಅಮೆರಿಕದ ಕಾಲೇಜುಗಳಲ್ಲಿ ಜ್ಞಾನಾರ್ಜನೆಯ ಆಸೆ ಹೊತ್ತಿರುವವರಿಗೆ ಶಾಕ್ ನೀಡಿದ್ದಾರೆ.
ಹೌದು, ಅಮೆರಿಕದ ಪ್ರತಿ ಕಾಲೇಜಿನಲ್ಲಿ ಪದವಿಪೂರ್ವ ಹಂತದಲ್ಲಿ ಶೇ.15ರಷ್ಟು ಮಾತ್ರವೇ ವಿದೇಶಿ ವಿದ್ಯಾರ್ಥಿಗಳು ಇರಬೇಕು. ಅದರಲ್ಲಿ ಒಂದು ದೇಶದವರು ಶೇ.5ರ ಮಿತಿಯನ್ನು ಮೀರಬಾರದು’ ಎಂದು ಟ್ರಂಪ್ ಸರ್ಕಾರ 9 ಪ್ರಮುಖ ವಿಶ್ವವಿದ್ಯಾಲಯಗಳಿಗೆ ಸುತ್ತೋಲೆ ಹೊರಡಿಸಿದೆ. ಆದೇಶವನ್ನು ಪಾಲಿಸಿದರೆ ಮಾತ್ರ ಸರ್ಕಾರ ಕಾಲೇಜು ಗಳಿಗೆ ಅನುದಾನವನ್ನು ನೀಡುವುದಾಗಿ ತಿಳಿಸಿದೆ ಹೀಗಾಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳು ಸರ್ಕಾರದ ಈ ಕ್ರಮವನ್ನು ಅನುಸರಿಸದೆ ವಿಧಿ ಇಲ್ಲ ಎಂಬಂತಾಗಿದೆ.
ಇದನ್ನೂ ಓದಿ:SBI: ಮಹಿಳೆಯರಿಗೆ ಗುಡ್ ನ್ಯೂಸ್ – ಮಹಿಳಾ ಉದ್ಯೋಗಿಗಳ ಪ್ರಮಾಣ ಶೇಕಡ 30 ರಷ್ಟು ಹೆಚ್ಚಳ
ಇನ್ನೂ ಇತ್ತೀಚೆಗೆ ಅಮೆರಿಕದ ವಿವಿಗಳಲ್ಲಿ ದೇಶದ ನಿಲುವಿಗೆ ವಿರುದ್ಧವಾದ ಪ್ಯಾಲೆಸ್ತೀನ್ ಹಾಗೂ ತೃತೀಯಲಿಂಗಿಗಳ ಪರ, ಸಮಾನತೆ, ಒಳಗೊಳ್ಳುವಿಕೆ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಆಗುತ್ತಿರುವ ಪ್ರತಿಭಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
