Bollywood : ಕೆಲವು ತಿಂಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ರಣವೀರ್ ಸಿಂಗ್ ಕಾಂತಾರ ದೈವವನ್ನು ದೇವ್ವವೆಂದು ಅಣಕಿಸುವ ಮುಖಾಂತರ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲೇ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಅವರು ನಾಡಿನ ಜನತೆಗೆ ಕ್ಷಮೆ ಕೇಳಿದ್ದರು. ಆದರೆ ಇದೀಗ ಬಾಲಿವುಡ್ ನಿಂದ ಮತ್ತೆ ಕಾಂತಾರಕ್ಕೆ ಅವಮಾನ ಮಾಡುವ ಯತ್ನ ನಡೆದಿದೆ.
ಬಾಲಿವುಡ್ನ ಹಾಸ್ಯ ಸಿನಿಮಾ ಒಂದು ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳಲು ಯತ್ನಿಸಿದೆ. ‘ರಾಹು-ಕೇತು’ ಹೆಸರಿನ ಹಿಂದಿ ಹಾಸ್ಯ ಪ್ರಧಾನ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದ್ದು, ಸಿನಿಮಾನಲ್ಲಿ ‘ಕಾಂತಾರ’ ಸಿನಿಮಾದ ಕೂಗು ಮತ್ತು ಸಿನಿಮಾದ ರೆಫೆರೆನ್ಸ್ಗಳನ್ನು ಸಹ ಬಳಸಲಾಗಿದೆ. ಆದರೆ ಸೆನ್ಸಾರ್ ಮಂಡಳಿ ಆ ಎರಡಕ್ಕೂ ಕತ್ತರಿ ಹಾಕಿದೆ. ಇಬ್ಬರು ಪೆದ್ದ ಯುವಕರ ಕತೆ ‘ರಾಹು-ಕೇತು’ ಆಗಿದ್ದು, ಸಿನಿಮಾನಲ್ಲಿ ಹಾಸ್ಯಕ್ಕಾಗಿ ‘ಕಾಂತಾರ’ ಸಿನಿಮಾದ ರೆಫೆರನ್ಸ್ ಅನ್ನು ಹಾಗೂ ದೈವದ ಕೂಗನ್ನು ಬಳಸಲಾಗಿತ್ತಂತೆ. ಆದರೆ ಅದರಿಂದ ಭಕ್ತರ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎಂದು ಆ ದೃಶ್ಯವನ್ನು ತೆಗೆದಿದೆ.
ಕಾಂತಾರಾ ಸಿನಿಮಾಗಳು ರಿಲೀಸ್ ಆದ ಬೆನ್ನಲ್ಲೇ ಅನೇಕರು ದೈವದ ರೀತಿ ವೇಷ ತೊಟ್ಟು, ದೈವದ ರೀತಿ ಕೂಗುತ್ತಾ ಕರಾವಳಿಯ ದೈವಗಳಿಗೆ ಅಪಚಾರ ಎಸಗುತ್ತಾ ಬಂದಿದ್ದರು. ಅಲ್ಲದೆ ದೈವದ ಅನುಕರಣೆ ಮಾಡುವುದು, ದೈವವನ್ನು ಹಾಸ್ಯಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಆದರೂ ಸಹ ಪದೇ ಪದೇ ಕೆಲವರು ಕಮರ್ಶಿಯಲ್ ಕಾರಣಗಳಿಗೆ, ಹಾಸ್ಯಕ್ಕೆ ದೈವದ ಅನುಕರಣೆ ಮಾಡುತ್ತಲೇ ಇದ್ದಾರೆ. ಇದೀಗ ಸೆನ್ಸಾರ್ ಮಂಡಳಿ ಸಮಯೋಚಿತವಾಗಿ ಬಾಲಿವುಡ್ ಸಿನಿಮಾದಿಂದ ‘ಕಾಂತಾರ’ ಸಿನಿಮಾದ ರೆಫೆರೆನ್ಸ್ ಅನ್ನು ತೆಗೆದು ಹಾಕಿದೆ.
