Home » Uttar Pradesh: 24ರ ಯುವಕನೊಂದಿಗೆ ಓಯೋ ರೂಮ್ ಹೊಕ್ಕ 35ರ ಚೆಲುವೆ – ಒಳಗೆ ಆಗಿದ್ದನ್ನೆಲ್ಲಾ ಕಂಡು ಪೋಲೀಸರೇ ಶಾಕ್!!

Uttar Pradesh: 24ರ ಯುವಕನೊಂದಿಗೆ ಓಯೋ ರೂಮ್ ಹೊಕ್ಕ 35ರ ಚೆಲುವೆ – ಒಳಗೆ ಆಗಿದ್ದನ್ನೆಲ್ಲಾ ಕಂಡು ಪೋಲೀಸರೇ ಶಾಕ್!!

0 comments

Uttar Pradesh: 24 ವಯಸ್ಸಿನ ಯುವಕನೊಂದಿಗೆ ಸರಹವಾಡಲು 35 ವರ್ಷದ ಮಹಿಳೆಯೊಬ್ಬಳು ಓಯೋ ರೂಮ್​​ಗೆ (Oyo Room) ಹೋಗಿದ್ದು ಅಲ್ಲಿಯೇ ಕೊನೆಯುಸಿರೆಳೆದಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು, ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಪೊಲೀಸ್ (Prayagraj Police) ಕಮಿಷನರೇಟ್‌ನ ಗಂಗಾನಗರ ವಲಯದ ಸೊರಾನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಭಾನುವಾರ ಸಂಜೆ ನಡೆದ ಮಹಿಳೆಯ ಕೊಲೆ (Women Murder) ಭಾರೀ ಸಂಚಲನ ಮೂಡಿಸಿದ್ದು, ನಗರದಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಸೊರಾನ್ ಪಟ್ಟಣದ ಉಸ್ರಾಹಿಯಲ್ಲಿರುವ ಓಯೋ ಹೋಟೆಲ್‌ನಲ್ಲಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ.

ಅಂದಹಾಗೆ ಮೃತ ಮಹಿಳೆಯನ್ನು 35 ವರ್ಷದ ಸುಮನ್ ದೇವಿ ಎಂದು ಗುರುತಿಸಲಾಗಿದೆ. ಅಚ್ಚರಿ ಏನಂದ್ರೆ ಆಕೆಯ ಪ್ರಿಯಕರ 24 ವರ್ಷದ ವಿವೇಕ್ ಕುಮಾರೇ ಆಕೆಯನ್ನು ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ ಕೊಲೆ ಮಾಡಿ ನೇರ ಪೊಲೀಸ್ ಠಾಣೆಗೆ ತೆರಲಿ ಶರಣಾಗಿ ಗೆಳತಿಯನ್ನು ಕೊಲೆ ಮಾಡಿ ಮೃತ ದೇಹವನ್ನು ಓಯೋ ಹೋಟೆಲ್‌ನಲ್ಲಿ ಇಟ್ಟಿದ್ದಾಗಿ ತಿಳಿಸಿದ್ದಾನಂತೆ.

ಯುವಕನ ಮಾತು ಕೇಳಿ ಶಾಕ್​ಗೆ ಒಳಗಾದ ಪೊಲೀಸರು, ಕೂಡಲೇ ಪೊಲೀಸ್ ಠಾಣೆ ಪ್ರಭಾರಿ ಸೊರವಾನ್ ಅವರು ಆರೋಪಿ ಯುವಕ ವಿವೇಕ್ ಕುಮಾರ್ ನನ್ನು ತಕ್ಷಣ ವಶಕ್ಕೆ ಪಡೆದುಕೊಂಡು ಓಯೋ ರೂಮ್​​ಗೆ ದೌಡಾಯಿಸಿದ್ದರು. ಹೋಟೆಲ್​ ರೂಮ್ ತೆರೆದು ನೋಡಿದರೆ ಮಹಿಳೆಯ ಮೃತದೇಹವು ಹೋಟೆಲ್‌ನ ಹಾಸಿಗೆಯ ಮೇಲೆ ಬಿದ್ದಿತ್ತು. ಕೂಡಲೇ ಸ್ಥಳಕ್ಕೆ ಫೋರೆನ್ಸಿಕ್ ತಜ್ಞರ ತಂಡವನ್ನು ಕರೆಯಿಸಿದ ಪೊಲೀಸರು ಕಾನೂನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು.

ಇನ್ನು ಬಂಧಿತ ಯುವಕ ವಿವೇಕ್ ಕುಮಾರ್ ನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದು, ಪ್ರೇಮ ಪ್ರಕರಣದಲ್ಲಿ ಮಹಿಳೆಯನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎಸಿಪಿ ಸೊರಾನ್ ಯಾದವ್ ಅವರ ಪ್ರಕಾರ, ಮೃತರ ಕುಟುಂಬ ಸದಸ್ಯರ ಪರವಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ

ಎಸಿಪಿ ಸೊರಾನ್ ಯಾದವ್ ಅವರು ಓಯೋ ಹೋಟೆಲ್‌ನ ಮ್ಯಾನೇಜರ್ ಮತ್ತು ಉದ್ಯೋಗಿಗಳನ್ನು ಸಹ ವಿಚಾರಣೆ ನಡೆಸಿದ್ದಾರೆ. ಆರೋಪಿ ಯುವಕ ಮಹಿಳೆಯೊಂದಿಗೆ ಇಲ್ಲಿಗೆ ಬಂದಿದ್ದು, ಯಾವ ಐಡಿ ಮತ್ತು ವಿಳಾಸದಲ್ಲಿ ಕೊಠಡಿ ಕಾಯ್ದಿರಿಸಿದ್ದಾನೆ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಮೃತರ ಕುಟುಂಬದ ಸದಸ್ಯರಿಗೂ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಹಿಳೆಗಿಂತ 10 ವರ್ಷ ಚಿಕ್ಕವನಾಗಿದ್ದು, ಇಬ್ಬರ ನಡುವೆ ಹಲವು ವರ್ಷಗಳಿಂದ ಸಂಬಂಧವಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಅಂದಹಾಗೆ ಮೃತ ಸುಮನ್ ದೇವಿ ಭದ್ರಿ ಗ್ರಾಮದ ನಿವಾಸಿಯಾಗಿದ್ದು, ಸುಮಾರು 10 ವರ್ಷಗಳ ಹಿಂದೆ ಬಲ್ಕಾರನ್‌ಪುರ ಗ್ರಾಮದಲ್ಲಿ ಮದುವೆಯಾಗಿದ್ದಳಂತೆ. ಮದುವೆಯ ನಂತರ ಪತಿಯಿಂದ ದೂರವಾಗಿ, ತಾಯಿ ಮನೆಗೆ ವಾಪಸ್ ಆಗಿದ್ದರಂತೆ. ಈ ವೇಳೆ ವಿವೇಕ್ ಕುಮಾರ್ ಪರಿಚಯ ಆಗಿ ಪ್ರೇಮಕ್ಕೆ ತಿರುಗಿತ್ತು. ಭಾನುವಾರ ಮಧ್ಯಾಹ್ನ ವಿವೇಕ್ ಕುಮಾರ್ ನೊಂದಿಗೆ ಶಿವಗಢ ಉಸ್ರಾಹಿಯಲ್ಲಿರುವ ಓಯೋ ಹೋಟೆಲ್‌ಗೆ ಇಬ್ಬರು ಬಂದಿದ್ದರು. ಪತಿ-ಪತ್ನಿಯಂತೆ ನಟಿಸಿ ರೂಮ್ ಬುಕ್ ಮಾಡಿದ್ದರಂತೆ. ರೂಮ್​ಗೆ ತೆರಳಿದ್ದ ವಿವೇಕ್ ಹಾಗೂ ಸುಮನ್ ದೇವಿ ನಡುವೆ ಮದುವೆ ವಿಚಾರವಾಗಿ ಜಗಳ ಆರಂಭವಾಗಿದೆ. ಮಹಿಳೆ 5 ಲಕ್ಷ ರೂಪಾಯಿಗೆ ಬೇಡಿಕೆ ಇಡುತ್ತಿದ್ದಳು. ಕೊಡದಿದ್ದರೆ ಎಫ್‌ಐಆರ್ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಳಂತೆ. ಹೀಗಾಗಿ ಕೊಲೆ ನಡೆದ ಶಂಕೆ ಎದುರಾಗಿದೆ.

You may also like

Leave a Comment