Home » ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿನ್ಯಾಥ್ ಅ.16 ರಂದು ಈ ಜಿಲ್ಲೆಗೆ ಭೇಟಿ!!!

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿನ್ಯಾಥ್ ಅ.16 ರಂದು ಈ ಜಿಲ್ಲೆಗೆ ಭೇಟಿ!!!

0 comments

ಅ.16 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮಂಡ್ಯ ಜಿಲ್ಲೆಗೆ ಆಗಮಿಸಲಿದ್ದಾರೆಂದು ಮಾಹಿತಿ ಲಭ್ಯವಾಗಿದೆ. ಅ.13 ರಿಂದ ಅ.16 ರವರೆಗೆ ಕೆ‌.ಆರ್‌. ಪೇಟೆಯ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. ಮಹಾಕುಂಭಮೇಳಕ್ಕೆ ಯೋಗಿ ಆದಿತ್ಯನಾಥ್‌ ಅವರಿಗೆ ಆಹ್ವಾನ ನೀಡಲಾಗಿದೆ.

ನಿನ್ನೆ ಲಖನೌನಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದ ಕ್ರೀಡಾ ಸಚಿವ ನಾರಾಯಣಗೌಡ‌‌‌ ಅವರು, ಮಹಾಕುಂಭಮೇಳಕ್ಕೆ ಆಹ್ವಾನ ನೀಡಿದ್ದರು. ಆಹ್ವಾನ‌ ಸ್ವೀಕರಿಸಿರುವ ಯೋಗಿ ಅವರು ಮಹಾಕುಂಭಮೇಳದಲ್ಲಿ ಭಾಗವಹಿಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಆದಿಚುಂಚನಗಿರಿ, ಧರ್ಮಸ್ಥಳದ ಇತಿಹಾಸ ಹಾಗೂ ನಾಥ ಪರಂಪರೆ ಬಗ್ಗೆ ನಾರಾಯಣಗೌಡರ ಜೊತೆ ಯೋಗಿ ಅವರು ಮಾತನಾಡಿ ತಿಳಿದುಕೊಂಡಿದ್ದಾರೆ.

You may also like

Leave a Comment