Home » UP Student Beaten, Urinated: 12 ತರಗತಿ ವಿದ್ಯಾರ್ಥಿ ಮುಖಕ್ಕೆ ಮೂತ್ರ ಮಾಡಿ, ಹಿಗ್ಗಾ ಮುಗ್ಗ ಥಳಿತ- ಘಟನೆ ಬಗ್ಗೆ ಕೇಳಿದ್ರೆ ನೀವೂ ಮರುಗುತ್ತೀರಾ!!

UP Student Beaten, Urinated: 12 ತರಗತಿ ವಿದ್ಯಾರ್ಥಿ ಮುಖಕ್ಕೆ ಮೂತ್ರ ಮಾಡಿ, ಹಿಗ್ಗಾ ಮುಗ್ಗ ಥಳಿತ- ಘಟನೆ ಬಗ್ಗೆ ಕೇಳಿದ್ರೆ ನೀವೂ ಮರುಗುತ್ತೀರಾ!!

1 comment
UP Student Urinated

UP Student Beaten, Urinated: ಉತ್ತರಪ್ರದೇಶದಲ್ಲಿ ಹೇಯ ಕೃತ್ಯ ಎಸಗಿರುವ ಘಟನೆ ವರದಿಯಾಗಿದೆ. ಉತ್ತರ ಪ್ರದೇಶದಲ್ಲಿ 12ನೇ ತರಗತಿ ವಿದ್ಯಾರ್ಥಿಯನ್ನು ಯುವಕರ ಗುಂಪೊಂದು ಮನಸೋ ಇಚ್ಛೆ ಥಳಿಸಿದ್ದು(UP Student Beaten, Urinated) ಮಾತ್ರವಲ್ಲದೆ ವಿದ್ಯಾರ್ಥಿಯ ಮುಖದ ಮೇಲೆ ಮೂತ್ರ ವಿಸರ್ಜನೆ (Urinated)ಮಾಡಿದ ಹೇಯ ಕೃತ್ಯ ವರದಿಯಾಗಿದೆ.

ಮೀರತ್ ನಗರದಲ್ಲಿನ ಸಂಬಂಧಿಯೊಬ್ಬರ ಮನೆಯಿಂದ ವಿದ್ಯಾರ್ಥಿ ಮನೆಗೆ ಹಿಂತಿರುಗುತ್ತಿದ್ದ. ಈ ಸಂದರ್ಭ ದುಷ್ಕರ್ಮಿಗಳ ಗುಂಪೊಂದು ವಿದ್ಯಾರ್ಥಿಯನ್ನು ಅಪಹರಣ ಮಾಡಿ, ಯಾರೂ ಇಲ್ಲದ ಜಾಗಕ್ಕೆ ಆತನನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತ ವಿದ್ಯಾರ್ಥಿಯ ತಂದೆ ದೂರಿನಲ್ಲಿ ತಿಳಿಸಿದ್ದಾರೆ.

ನವೆಂಬರ್ 13ರಂದು, ಮೀರತ್‌ನಲ್ಲಿ ನಡೆದ ಈ ಘಟನೆಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆನ್‌ಲೈನ್‌ನಲ್ಲಿ ಶೇರ್ ಮಾಡಲಾಗಿದೆ. ಕಡು ಬೂದು ಬಣ್ಣದ ಜಾಕೆಟ್ ಧರಿಸಿದ್ದ ವ್ಯಕ್ತಿಯೊಬ್ಬ, ನಿರ್ಜನ ಪ್ರದೇಶದಲ್ಲಿ ವಿದ್ಯಾರ್ಥಿಯನ್ನು ಥಳಿಸುವುದು ಒಂದು ವಿಡಿಯೋದಲ್ಲಿ ಕಂಡುಬರುತ್ತದೆ. ಇಬ್ಬರು ವ್ಯಕ್ತಿಗಳು ಅದನ್ನು ನೋಡುತ್ತಾ, ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ವಿದ್ಯಾರ್ಥಿ ಹಲ್ಲೆ ಮಾಡುವುದನ್ನು ನಿಲ್ಲಿಸುವಂತೆ ಪರಿ ಪರಿಯಾಗಿ ಅಂಗಲಾಚುತ್ತಿದ್ದರೂ ದುಷ್ಕರ್ಮಿಗಳು ಆತನ ತಲೆ ಹಾಗೂ ಹಿಂಬದಿಗೆ ಮತ್ತೆ ಮತ್ತೆ ಹೊಡೆದಿದ್ದಾರೆ. ಈ ನಡುವೆ ಮತ್ತೊಬ್ಬ ವಿದ್ಯಾರ್ಥಿಯ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡುವ ದೃಶ್ಯ ವೈರಲ್ ಆಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ, ಉತ್ತರ ಪ್ರದೇಶ ಪೊಲೀಸರು ಏಳು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Rashmika DeepFake Video: ರಶ್ಮಿಕಾ ಮಂದಣ್ಣಳ ಮತ್ತೊಂದು ಡೀಪ್‌ಫೇಕ್ ವಿಡಿಯೋ ವೈರಲ್ !!

You may also like

Leave a Comment