Uttarpradesh Crime: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಟಿಕೆಟ್ ವಿಚಾರದಲ್ಲಿ (Uttarpradesh Crime)ಯುವಕನೊಬ್ಬ ಬಸ್ ಕಂಡಕ್ಟರ್ ಜೊತೆ ಗಲಾಟೆ ಮಾಡಿ ಆತನ ಮೇಲೆ ಚಾಕುವಿನಿಂದ ಇರಿದಿರುವ ಘಟನೆ ಶುಕ್ರವಾರ(ನ.24 ರಂದು) ನಡೆದಿದೆ.
ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಂಡಕ್ಟರ್ ಟಿಕೆಟ್ ದರದ ವಿಚಾರವಾಗಿ ವಾಗ್ವಾದ ನಡೆಸಿ ಚಾಕು(Crime)ಇರಿದ ಘಟನೆ ವರದಿಯಾಗಿದೆ. ಬೆಳಿಗ್ಗೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಲಾರೆಬ್ ಹಶ್ಮಿ (20) ಎಂದು ಗುರುತಿಸಲಾಗಿದೆ. ವಾಗ್ವಾದದ ನಡುವೆ ಏಕಾಏಕಿ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿ ಚೂಪಾದ ಚಾಕುವಿನಿಂದ ಹಲ್ಲೆ ನಡೆಸಿದ್ದು, ಆತನ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಚಾಕುವಿನಿಂದ ಇರಿದು ಕಾಲೇಜು ಕ್ಯಾಂಪಸ್ ತೆರಳಿದ್ದಾನೆ.
ಕಾಲೇಜು ಕ್ಯಾಂಪಸ್ ನಲ್ಲಿ ಹಶ್ಮಿ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಕೃತ್ಯವನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.” ಬಸ್ ಕಂಡಕ್ಟರ್ ಧರ್ಮನಿಂದನೆ ಮತ್ತು ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಾರೆ” ಎಂದು ಆರೋಪಿಸಿ ಮಾಡಿರುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಲೇಜಿಗೆ ಹೋಗಿ ಆರೋಪಿಯನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಕಾಲಿಗೆ ಪೊಲೀಸರು ಫೈಯರ್ ಮಾಡಿ, ಕೃತ್ಯವೆಸಗಿದ ಚಾಕುವನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇತ್ತ ಗಾಯಾಳು ಕಂಡಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
