Uttar Pradesh: ಪ್ರೀತಿ ಹೆಸರಲ್ಲಿ ಮೋಸ ಹೋಗುವುದು ಹೆಚ್ಚಾಗಿ ನಡೆಯುತ್ತಿದೆ. ಪ್ಯಾರ್, ಸೆಕ್ಸ್, ದೋಖ (Love Failure) ಇದೊಂದು ಚೈನ್ ಲಿಂಕ್ ಅಂದರೆ ತಪ್ಪಾಗಲಾರದು. ಇದೀಗ ಪತ್ನಿಗೆ ಗೊತ್ತಾಗದಂತೆ ಅಕ್ರಮ ಸಂಬಂಧ ಹೊಂದಿದ್ದ ಯುವಕ, ಗೆಳತಿ ಮಾಡಿದ ಘೋರ ಕೃತ್ಯದಿಂದ ಸಮಸ್ಯೆಯಲ್ಲಿ ಬಿದ್ದಿದ್ದಾನೆ.
ಉತ್ತರ ಪ್ರದೇಶ (Uttar Pradesh), ಕಾನ್ಪುರದ ಚೌಬೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ವ್ಯಕ್ತಿಯೊಬ್ಬ ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದ. ಆದರೆ, ಅದೇ ಗ್ರಾಮದ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಹೀಗಿದ್ದಾಗ ಸೋಮವಾರ ಮಧ್ಯರಾತ್ರಿ ಗೆಳತಿಯು ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಅಲ್ಲದೇ, ತನ್ನ ಇನ್ನೊಬ್ಬ ಗೆಳತಿಯನ್ನೂ ಆಕೆ ಕರೆಯಿಸಿಕೊಂಡಿದ್ದಳು. ಪ್ರಿಯಕರ ಮನೆಗೆ ಬಂದ ಬಳಿಕ ವಿಚಿತ್ರ ಬೇಡಿಕೆಯೊಂದನ್ನು ಆಕೆ ಇಟ್ಟಿದ್ದಾಳೆ. ತನ್ನ ಇನ್ನೊಬ್ಬ ಸ್ನೇಹಿತೆಯ ಜೊತೆಗೂ ದೈಹಿಕ ಸಂಪರ್ಕ ಹೊಂದಲು ಸ್ವತಃ ಗೆಳತಿಯೇ ಬಂಪರ್ ಆಫರ್ ನೀಡಿದ್ದಾಳೆ. ಇದು ಯುವಕನಿಗೆ ಇಷ್ಟವಾಗದೆ, ತಾನು ಹಾಗೆ ಮಾಡಲು ನಿರಾಕರಿಸಿದ್ದಾನೆ.
ಆಕೆ ಪ್ರಿಯಕರನ ಮೇಲೆ ತೀವ್ರ ಒತ್ತಡ ಹೇರಿದರು, ಇನ್ನೊಬ್ಬ ಮಹಿಳೆ ಜೊತೆ ದೈಹಿಕ ಸಂಪರ್ಕ ನಡೆಸಲು ಸಾಧ್ಯವಿಲ್ಲ ಎಂದಿದ್ದಾನೆ. ಇದು ಗೆಳತಿಯ ಕೋಪಕ್ಕೆ ಕಾರಣವಾಗಿ, ಕೋಪದಲ್ಲಿ ಗೆಳತಿ ಆಕೆಯ ಗೆಳೆಯನ ಗುಪ್ತಾಂಗವನ್ನು ಬಾಯಿಯಿಂದ ಕಚ್ಚಿದ್ದಾಳೆ. ಕಚ್ಚಿದ ಭೀಕರತೆಯಿಂದ ರಕ್ತ ಕೂಡ ಚಿಮ್ಮಿದೆ. ಅಲ್ಲದೇ ಗೆಳೆಯ ನೋವಿನಿಂದ ಜೋರಾಗಿ ಕೂಗಿಕೊಂಡಿದ್ದಾನೆ. ತೀವ್ರ ಘಾಸಿಗೊಂಡ ಯುವಕನ ರೋಧನೆಯಿಂದ ಅಕ್ಕಪಕ್ಕದವರು ಆ ಮನೆಗೆ ಬಂದಿದ್ದಾರೆ.
ಈ ಘಟನೆಯಿಂದ ತೀವ್ರ ಮುಜುಗರಕ್ಕೀಡಾಗ ಯುವಕ ಅಲ್ಲಿಂದ ರಾತ್ರೋ ರಾತ್ರಿ ಮನೆಗೆ ಓಡಿ ಹೋಗಿ, ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆತ ಈ ವಿಷಯವನ್ನು ಪತ್ನಿಗೆ ತಿಳಿಸಿದ್ದಾನೆ. ಈ ವಿಷಯ ಹೊರಗೆ ಗೊತ್ತಾದರೆ, ಮರ್ಯಾದೆ ಹಾಳಾಗುತ್ತದೆ. ಪೊಲೀಸರಿಗೂ ಹೇಳಬೇಡ ಎಂದು ಪತ್ನಿಯಲ್ಲಿ ಕೋರಿಕೊಂಡಿದ್ದಾನೆ.
ಆದರೆ ಗಂಡನ ಸ್ಥಿತಿ ಕಂಡು ಹೆದರಿದ ಪತ್ನಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕಾಗಮಿಸಿ ನೋವಿನಿಂದ ಒದ್ದಾಡುತ್ತಿದ್ದ ಯುವಕನನ್ನು ಚೌಬೇಪುರ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಪ್ತಾಂಗಕ್ಕೆ ತೀವ್ರ ಗಾಯವಾಗಿದ್ದರಿಂದ ಆತನ ಸ್ಥಿತಿ ಗಂಭೀರವಾಗಿದೆ ಎಂದು ಕಾನ್ಪುರದ ಜಿಲ್ಲಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ವಿಚಾರಣೆ ನಂತರ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
