Home » Uttarpradesh: ಸ್ನೇಹಿತನ ಜೊತೆ 500 ರೂ. ಗೆ ಬೆಟ್ಟಿಂಗ್‌: ನದಿಗೆ ಹಾರಿದ ಯುವಕ ಸಾವು, ವಿಡಿಯೋ ವೈರಲ್

Uttarpradesh: ಸ್ನೇಹಿತನ ಜೊತೆ 500 ರೂ. ಗೆ ಬೆಟ್ಟಿಂಗ್‌: ನದಿಗೆ ಹಾರಿದ ಯುವಕ ಸಾವು, ವಿಡಿಯೋ ವೈರಲ್

0 comments

Uttarpradesh: ಉತ್ತರ ಪ್ರದೇಶದ ಬಾಗ್ಪತ್‌ ಜಿಲ್ಲೆಯ ನಿವಾಡಾ ಗ್ರಾಮದಲ್ಲಿ ಯುವಕನೋರ್ವ (19) ತನ್ನ ಸ್ನೇಹಿತ ಜೊತೆ ರೂ.500 ಬೆಟ್‌ ಕಟ್ಟಿ ನೀರಿಗೆ ಹಾರಿದ್ದು, ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.

ಭಾರೀ ಮಳೆಯ ಕಾರಣ ಯಮುನಾ ನದಿ ಅಪಾಯದ ಮಟ್ಟ ಏರಿದ್ದು, ಯುವಕ ಜುನೈದ್‌ ನೀರಿಗೆ ಜಿಗಿದಿದ್ದಾನೆ. ಈ ದೃಶ್ಯವನ್ನು ಸ್ನೇಹಿತ ಸೆರೆಹಿಡಿದಿದ್ದಾಣೆ. ನಂತರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಜುನೈದ್‌ನನ್ನು ನಿರಂತರ ಶೋಧ ಮಾಡಲಾಗಿದ್ದು, ಯುವಕ ಪತ್ತೆಯಾಗಿಲ್ಲ. ಬಾಗ್ಪತ್‌ ಪೊಲೀಸರು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (SDRF) ಸಹಾಯದಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಆದರೆ ಇಲ್ಲಿಯವರೆಗೆ ಯುವಕನ ಯಾವುದೇ ಸುಳಿವು ಪತ್ತೆಯಾಗಿಲ್ಲ.

ಬೆಟ್ಟಿಂಗ್‌ ಮತ್ತು ಘಟನೆಯ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸ್ನೇಹಿತರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದು ಪೊಲೀಸ್‌ ಅಧಿಕಾರಿಗಳು ಹೇಳಿದ್ದಾರೆ. ಈ ರೀತಿಯ ನಿರ್ಲಕ್ಷ್ಯವನ್ನು ಸಹಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

 

You may also like