Reunion Fraud: ಉತ್ತರ ಪ್ರದೇಶದ ಅಮೇಥಿಯಲ್ಲಿ 22ವರ್ಷಗಳ ಹಿಂದೆ ತನ್ನ ಪುತ್ರನನ್ನು ಕಳೆದುಕೊಂಡಿದ್ದ ಕುಟುಂಬವೊಂದು ತಮ್ಮ ಪುತ್ರ ಮನೆಗೆ ಬಂದ ಖುಷಿಯಲ್ಲಿತ್ತು ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಆ ಖುಷಿ ಕೇವಲ ಒಂದೇ ದಿನಕ್ಕೆ ಸೀಮತವಾಗಿದ್ದು, ಇದೀಗ ಇದು ಪುನರ್ಮಿನಲನವಲ್ಲ. ಇದೊಂದು ಸುಸಜ್ಜಿತ ವಂಚನೆ ಎಂದು ತಿಳಿದು ಬಂದಿದೆ. ನಫೀಸ್ ಎಂಬಾತ ನಟೋರಿಯಸ್ ಕ್ರಿಮಿನಲ್ ಎಂದು ಇದೀಗ ಗೊತ್ತಾಗಿದೆ. ಮಗನ ರೂಪದಲ್ಲಿ ಬಂದು ಹಿಂದೂ ಕುಟುಂಬಕ್ಕೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.
ತಮ್ಮ ಮಗನನ್ನು ಹೋಲುವ ಈ ಯುವಕ ಮನೆಗೆ ಹಿಂದಿರುಗಿದಾಗ ಕುಟುಂಬ ಸಂತೋಷ ಪಟ್ಟಿತ್ತು. ಆದರೆ ಆತ ದುಡ್ಡು ಪಡೆದು ಪರಾರಿಯಾದಾಗ ಮಾತ್ರ ಆಘಾತಕ್ಕೆ ಒಳಗಾಗಿದೆ ಹಿಂದೂ ಕುಟುಂಬ. ವರದಿಯ ಪ್ರಕಾರ, ಅರುಣ್ ಎಂದು ನಟಿಸಿ, ತಾನು ನಿಮ್ಮ ಕಾಣೆಯಾದ ಮಗ, ನಿಮ್ಮ ಮನೆಗೆ ಮರಳಿ ಬಂದಿದ್ದಕ್ಕೆ ಪ್ರತಿಯಾಗಿ 10 ಲಕ್ಷ ರೂಪಾಯಿ ಪಡೆದಿದ್ದವರ ನಫೀಸ್ ಎಂಬಾತ. ಈತ ಇನ್ನೂ ಹೆಚ್ಚಿನ ಹಣ ಕೇಳಿದ್ದು ಮನೆಯವರು ಕೊಟ್ಟಿರಲಿಲ್ಲ. ಇದೀಗ ಈತ ಮೋಸ ಮಾಡಿ, ದುಡ್ಡಿನ ಜೊತೆ ಪರಾರಿಯಾಗಿದ್ದಾನೆ.
11 ವರ್ಷದವನಿದ್ದಾಗ ಈ ಬಾಲಕ ನಾಪತ್ತೆಯಾಗಿದ್ದು, ಅನಂತರ 22 ವರ್ಷಗಳ ಬಳಿಕ ಬಂದಿದ್ದು, ತನ್ನ ಹೆತ್ತ ತಾಯಿಯಿಂದಲೇ ಭಿಕ್ಷೆ ಪಡೆದಿದ್ದಾನೆ ಎಂದು ಸುದ್ದಿ ಹರಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಭಾರೀ ವೈರಲ್ ಆಗಿತ್ತು. ತಾಯಿ ಮಗನ ಪುನರ್ಮಿಲನಕ್ಕೆ ಜನ ಖುಷಿ ಪಟ್ಟಿದ್ರು.
ತಮ್ಮ ಮಗನನ್ನು ವಾಪಸು ಹುಡುಕಲು ಕುಟುಂಬ ಆಸ್ತಿಯನ್ನು ಮಾರಲು ಮುಂದಾಗಿತ್ತು. ಇದನ್ನು ತಿಳಿದ ವಂಚಕ ನಫೀಸ್ ಆತನಂತೆ ವೇಷ ಹಾಕಿಕೊಂಡು ಬಂದು, ದುಡ್ಡು ಪಡೆದು ಮನೆಯವರ ಕಣ್ಣಿಗೆ ಮಣ್ಣೆರಚಿ ಪರಾರಿಯಾಗಿದ್ದಾನೆ. ನೀವು ಖರ್ಚು ಮಾಡಲು ಮುಂದಾಗಿರುವ ದುಡ್ಡನ್ನು ಕೊಡಿ ಎಂದು ದಂಬಾಲು ಬಿದ್ದಿದ್ದ ಎಂಬ ವಿಷಯ ನಂತರ ಗೊತ್ತಾಗಿದೆ.
ನಫೀಸ್ ಹಿಂದೂ ಕುಟುಂಬಕ್ಕೆ ಮೋಸ ಮಾಡಿದ್ದ. ಆತ ಸನ್ಯಾಸಿಯಂತೆ ಬಂದು ಹಣ ಸುಲಿಗೆ ಮಾಡಬೇಕೆನ್ನುವುದು ಪ್ಲಾನ್ ಮಾಡಿದ್ದು, ಅದಕ್ಕೆ ತಾಯಿ ಮಗ ಭಾವನಾತ್ಮಕ ಸಂಬಂಧ ಬಳಸಿ ಏಮಾರಿಸಿಬಿಟ್ಟಿದ್ದ. ಈತ ಮನೆಗೆ ಬಂದವನೇ ದೊಡ್ಡ ಮಟ್ಟದ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ವರದಿಗಳ ಪ್ರಕಾರ ನಫೀಸ್ ಕುಟುಂಬ ಕುಖ್ಯಾತ ಮೋಸದ ಕುಟುಂಬಕ್ಕೆ ಹೆಸರುವಾಸಿ. ಅಮಾಯಕ ಕುಟುಂಬದವರನ್ನೇ ಟಾರ್ಗೆಟ್ ಮಾಡಿ ಮೋಸ ಮಾಡುವುದು ಇವರಿಗೆ ಎತ್ತಿದ ಕೈ. ನಫೀಸ್‌ನ ಕುಟುಂಬದವರು ಹಲವು ಬಾರಿ ಜೈಲಿಗೆ ಹೋಗಿದ್ದಾರೆ. ಇವರ ಮೋಸದ ತಂತ್ರಕ್ಕೆ ಹಲವು ಕುಟುಂಬಗಳು ಆರ್ಥಿಕ ನಷ್ಟಕ್ಕೆ ಒಳಗಾಗಿದೆ.
ಇದೀಗ ಉತ್ತರ ಪ್ರದೇಶದ ಪೊಲೀಸರು ಸನ್ಯಾಸಿಗಳಂತೆ ಬಂದು ಹಿಂದೂ ಕುಟುಂಬಗಳನ್ನು ಮೋಸ ಮಾಡುವುದು ನಡೆಯುತ್ತಿದೆ. ಮೋಸ ಮಾಡುವವರ ಬಗ್ಗೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ.
https://twitter.com/jpsin1/status/1754006981751472579
