ವಡೋದರಾ: ಗುಜರಾತ್’ನ ವಿಶ್ವವಿದ್ಯಾಲಯದ ತರಗತಿಯಲ್ಲೇ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.ಗುಜರಾತ್ ನ ವಡೋದರಾದ ಮಹಾರಾಜ ಸಯ್ಶಾಜಿರಾವ್ ವಿಶ್ವವಿದ್ಯಾಲಯದ ಪರೀಕ್ಷಾ ಕೊಠಡಿಯೊಳಗೆ ಇಬ್ಬರು ವಿದ್ಯಾರ್ಥಿಗಳು ಚುಂಬಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ವಿಶ್ವವಿದ್ಯಾಲಯ ಅಧಿಕಾರಿಗಳು ಸೋಮವಾರ ತನಿಖೆಗೆ ಆದೇಶಿಸಿದ್ದಾರೆ.
ವಿವಿಯಲ್ಲಿ ಇತ್ತೀಚೆಗೆ ನಡೆದ ‘ಬ್ಯಾಕ್‌ಲಾಗ್’ ಪರೀಕ್ಷೆಯ ಸಮಯದಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಡೀನ್ ಪ್ರೊ.ಕಲ್ಪನಾ ಗಾವ್ಲಿ ಹೇಳಿದ್ದಾರೆ.
ವಿದ್ಯಾರ್ಥಿಯೊಬ್ಬ ಕಲಾ ವಿಭಾಗಕ್ಕೆ ಸೇರಿದ ತರಗತಿಯೊಳಗೆ ತನ್ನ ಪಕ್ಕದ ಹುಡುಗಿಯನ್ನು ಚುಂಬಿಸುತ್ತಿರುವುದನ್ನು ಕಾಣಬಹುದು. ಹಿಂದೆ ಇದ್ದ ವ್ಯಕ್ತಿಯೊಬ್ಬರು ಮೊಬೈಲ್ ಫೋನ್ ಕ್ಯಾಮೆರಾ ಬಳಸಿ ಅದನ್ನು ಗುಟ್ಟಾಗಿ ಚಿತ್ರೀಕರಿಸಿದ್ದಾರೆ
ಈ ವೀಡಿಯೊ ವೈರಲ್ ಆದ ನಂತರ, ಎಬಿವಿಪಿ ಕಾರ್ಯಕರ್ತರು ಅಂತಹ ಚಟುವಟಿಕೆಗಳನ್ನು ನಿಲ್ಲಿಸಲು ವಿಫಲವಾದ ಇಬ್ಬರೂ ವಿದ್ಯಾರ್ಥಿಗಳು ಮತ್ತು ಪರೀಕ್ಷಾ ಮೇಲ್ವಿಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಪರೀಕ್ಷೆಯ ಸಮಯದಲ್ಲಿ ತರಗತಿಯೊಳಗೆ ಮೊಬೈಲ್ ಫೋನ್‌ಗಳನ್ನು ಹೇಗೆ ಬಂತು ಅನ್ನೋದು ಕೂಡಾ ತನಿಖೆ ಆಗಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
