Vande Bharat: ವಂದೇ ಭಾರತ್ ರೈಲಿನಲ್ಲಿ ಅಸಭ್ಯವಾಗಿ ವರ್ತಿಸಿ ವಿಡಿಯೋ ವೈರಲ್ ಆಗಿ ತೀವ್ರ ಆಕ್ರೋಶ ವ್ಯಕ್ತವಾದ ನಂತರ, ಎರಡೂ ಕುಟುಂಬದವರು ಸೇರಿ ಈ ಜೋಡಿಗೆ ಮದುವೆ ಮಾಡಲು ಮುಂದಾಗಿದ್ದಾರೆ.
ಹೌದು,ಒಂದೇ ಭಾರತ್ ರೈಲಿನಲ್ಲಿ ಅಸಭ್ಯವಾಗಿ ರೋಮ್ಯಾನ್ಸ್ ಮಾಡಿ ವೈರಲ್ ಆದ ಜೋಡಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ವೀಡಿಯೋ ವೈರಲ್ ಆದ ನಂತರ ಎರಡು ಮನೆಯವರು ಈ ಜೋಡಿಗೆ ಮದುವೆ ಮಾಡಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಗಾಜಿಯಾಬಾದ್ ಮೀರತ್ ವಂದೇ ಭಾರತ್ ರೈಲಿನಲ್ಲಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅನೇಕರು ಈ ಜೋಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಮಕ್ಕಳ ಕೃತ್ಯದಿಂದ ಕುಟುಂಬದವರು ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿದ್ದು, ವರದಿಯ ಪ್ರಕಾರ, ಇಬ್ಬರ ಮದುವೆಗೆ ಕುಟುಂಬದವರು ದಿನಾಂಕ ನಿಗದಿ ಮಾಡಿದ್ದಾರೆ.
