Home » Vastu Tips : ಮಣ್ಣಿನ ಮಡಕೆಯನ್ನು ಈ ದಿಕ್ಕಿನಲ್ಲಿಟ್ಟರೆ ಲಕ್ಷ್ಮಿ ಒಲಿದು ಬರುತ್ತಾಳೆ!!

Vastu Tips : ಮಣ್ಣಿನ ಮಡಕೆಯನ್ನು ಈ ದಿಕ್ಕಿನಲ್ಲಿಟ್ಟರೆ ಲಕ್ಷ್ಮಿ ಒಲಿದು ಬರುತ್ತಾಳೆ!!

1 comment

Vastu tips for pots : ಇತ್ತೀಚಿನ ದಿನಗಳಲ್ಲಿ ಮಣ್ಣಿನ ಮಡಿಕೆ ಮನೆಗಳಲ್ಲಿ ಇಡುವುದು ಬಹಳ ಆಪರೂಪ. ಆದರೆ ಹಿಂದೆಲ್ಲಾ ಮಣ್ಣಿನ ಮಡಿಕೆಯಲ್ಲೇ ಅಡುಗೆ ತಯಾರಿಸುವುದು, ಮಡಿಕೆಯ ನೀರನ್ನೇ ಕುಡಿಯುವುದು ಇತ್ತು. ಹಿಂದಿನಿಂದಲೂ ಈಗಲು ಸಹ ಮಣ್ಣನ್ನು ಮಂಗಳದ ಸಂಕೇತ ಎನ್ನಲಾಗುತ್ತದೆ. ಕುಂಬಾರಿಕೆ ಸಂತೋಷ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮಣ್ಣಿನ ಪಾತ್ರೆ (Vastu tips for pots) ಇರಬೇಕು. ಮಣ್ಣನ್ನು ಮಂಗಳ ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ಮಣ್ಣಿನ ಪಾತ್ರೆಯ ನೀರನ್ನು ಸೇವಿಸುವುದರಿಂದ ಧೈರ್ಯ, ಶೌರ್ಯ ಮತ್ತು ಶಕ್ತಿ ಬರುತ್ತದೆ. ಹೂಜಿಯ ನೀರು (water) ಬುಧ ಮತ್ತು ಚಂದ್ರನಿಗೆ ಸಂಬಂಧಿಸಿದೆ, ಇದರಿಂದಾಗಿ ಮನಸ್ಸು ಯಾವಾಗಲೂ ಶಾಂತವಾಗಿರುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.

ಮನೆಯಲ್ಲಿ ಮಣ್ಣಿನ ಮಡಿಕೆ (clay vessel) ಇಡುವುದು ಸಂತೋಷ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗುತ್ತದೆ. ಆದರೆ, ಮಣ್ಣಿನ ಮಡಕೆಯನ್ನು ಎಲ್ಲೆಂದರಲ್ಲಿ ಇಡಬಾರದು. ಕೆಲವೊಂದು ದಿಕ್ಕಿನಲ್ಲಿ ಇಟ್ಟರೆ ತುಂಬಾನೇ ಒಳಿತು. ಹಾಗಾದ್ರೆ ವಾಸ್ತು ಶಾಸ್ತ್ರ ಏನು ಹೇಳುತ್ತೇ? ಯಾವ ದಿಕ್ಕಿನಲ್ಲಿಟ್ಟರೆ ಒಳ್ಳೆಯದು? ನೋಡೋಣ.

ಮೊದಲು ಮಗುವಿಗೆ ಮತ್ತು ವಿಶೇಷವಾಗಿ ಹೆಣ್ಣುಮಕ್ಕಳಿಗೆ ನೀರು ಕೊಡಬೇಕು. ಇದರಿಂದ ತಾಯಿ ಲಕ್ಷ್ಮಿ ಸಂತಸಗೊಂಡು ನಿಮ್ಮ ಸಂಪತ್ತನ್ನು ಹೆಚ್ಚು ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಮಣ್ಣಿನ ಮಡಕೆ ಇಡಲು ಉತ್ತರ ದಿಕ್ಕು ಉತ್ತಮ. ಉತ್ತರ ದಿಕ್ಕು ವರುಣನ ದಿಕ್ಕಿಗೆ ಹೋಲಿಕೆ. ವರುಣ ಅಂದ್ರೆ ನೀರು. ಹಾಗಾಗಿ ಅದನ್ನು ಈ ದಿಕ್ಕಿನಲ್ಲಿ ಇಟ್ಟರೆ ಬಹಳ ಒಳ್ಳೆಯದಾಗುತ್ತದೆ. ನೀರು ಹೆಚ್ಚಾಗಿರುತ್ತದೆ. ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಮಣ್ಣಿನ ಮಡಕೆಯನ್ನು ಈಶಾನ್ಯ ದಿಕ್ಕಿನಲ್ಲಿಟ್ಟರೂ ಒಳಿತೇ. ಇದರಿಂದ ಮನೆಯ ಆದಾಯ ಮತ್ತು ಪ್ರಗತಿ ಹೆಚ್ಚುತ್ತದೆ.

ಇದನ್ನೂ ಓದಿ: Astrologer Copper Ring : ತಾಮ್ರದ ಉಂಗುರದಿಂದ ನಿಮ್ಮ ಅದೃಷ್ಟ ಬೆಳಗುತ್ತೆ!

You may also like

Leave a Comment