Home » ವಾಹನ ಖರೀದಿಸುವವರಿಗೊಂದು ಸಿಹಿ ಸುದ್ದಿ | ಇನ್ನು ಮುಂದೆ ಹೊಸ ವಾಹನ ಖರೀದಿಸುವಾಗ ಸ್ಥಳದಲ್ಲೇ ದೊರೆಯಲಿದೆ ‘ಆರ್‌ಸಿ’

ವಾಹನ ಖರೀದಿಸುವವರಿಗೊಂದು ಸಿಹಿ ಸುದ್ದಿ | ಇನ್ನು ಮುಂದೆ ಹೊಸ ವಾಹನ ಖರೀದಿಸುವಾಗ ಸ್ಥಳದಲ್ಲೇ ದೊರೆಯಲಿದೆ ‘ಆರ್‌ಸಿ’

by ಹೊಸಕನ್ನಡ
0 comments

ವಾಹನ ಸವಾರರಿಗೊಂದು ಸಿಹಿ ಸುದ್ದಿ ನೀಡಿದೆ ದೆಹಲಿ ಸರ್ಕಾರ. ವಾಹನವನ್ನು ಖರೀದಿಸುವವರು ನೋಂದಣಿ ಪ್ರಮಾಣಪತ್ರಕ್ಕಾಗಿ (ಆರ್‌ಸಿ) ಹೆಚ್ಚು ಸಮಯ ಕಾಯಬೇಕಾಗಿಲ್ಲ. ಅವರು ಆರ್‌ಟಿಒಗೂ ಹೋಗಬೇಕಾಗಿಲ್ಲ. ಇನ್ನು ಮುಂದೆ ದೆಹಲಿಯ ವಾಹನ ವಿತರಕರೇ ತಮ್ಮ ಗ್ರಾಹಕರಿಗೆ ವಾಹನ ನೋಂದಣಿ ಸಂಖ್ಯೆಗಳನ್ನು ನೀಡಲಿದ್ದಾರೆ.

ಹೌದು, ಇದೀಗ ದೆಹಲಿಯ ವಾಹನ ವಿತರಕರು ಸ್ಥಳದಲ್ಲೇ ನೋಂದಣಿ ಪ್ರಮಾಣಪತ್ರಗಳನ್ನು ಒದಗಿಸುವ ಸೌಲಭ್ಯವನ್ನು ಆರಂಭಿಸಿದ್ದಾರೆ. ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ರವರು ವಾಹನ ಶೋರೂಂಗೆ ಭೇಟಿ ನೀಡಿ ಸ್ಥಳದಲ್ಲೇ ವಾಹನ ನೋಂದಣಿ ಪ್ರಮಾಣಪತ್ರ ನೀಡುವ ಪ್ರಯೋಜನಗಳನ್ನು ವಿವರಿಸಿದರು. ಈಗ ಹೊಸ ಆರ್‌ಸಿಯನ್ನು ಹೈಟೆಕ್ ಮಾಡಲಾಗಿದೆ. ಹೊಸ ಆರ್‌ಸಿಯಲ್ಲಿ ಹಳೆಯ ಚಿಪ್ ಬದಲಿಸಿ ಹೊಲೊಗ್ರಾಮ್ ನೀಡಲಾಗುತ್ತದೆ. ಈ ಹಾಲೋಗ್ರಾಮ್‌ನಿಂದ ನಕಲಿ ಆರ್‌ಸಿಗಳನ್ನು ನಕಲು ಮಾಡುವ ಸಮಸ್ಯೆಯೂ ಕೊನೆಗೊಳ್ಳುತ್ತದೆ.

ಹೊಸ ಆರ್‌ಸಿಯಲ್ಲಿ ಕ್ಯೂಆರ್ ಕೋಡ್ ನೀಡಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿ ಚಾಲಕ ಹಾಗೂ ಅವರ ವಾಹನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಬಹುದು. ಈ ವರ್ಷದ ಮಾರ್ಚ್ 17ರಂದು ದೆಹಲಿಯಲ್ಲಿ ಹೊಸ ಆರ್‌ಸಿ ನೀಡುವ ಯೋಜನೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಯಿತು ಎಂದು ಅಲ್ಲಿಯ ಸಾರಿಗೆ ಸಚಿವರಾದ ಕೈಲಾಶ್ ಗೆಹ್ಲೋಟ್ ಮಾಹಿತಿ ನೀಡಿದ್ದಾರೆ.

You may also like

Leave a Comment