Home » Bridge collapse: ಗುಜರಾತ್‌ನಲ್ಲಿ ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು – ಕನಿಷ್ಠ 10 ಜನರ ಸಾವು

Bridge collapse: ಗುಜರಾತ್‌ನಲ್ಲಿ ಸೇತುವೆ ಕುಸಿದು ನದಿಗೆ ಉರುಳಿದ ವಾಹನಗಳು – ಕನಿಷ್ಠ 10 ಜನರ ಸಾವು

by V R
0 comments

Bridge collapse: ಗುಜರಾತ್‌ನ ವಡೋದರಾದಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಸೇತುವೆಯ ಒಂದು ಭಾಗ ಬುಧವಾರ ಬೆಳಗ್ಗೆ ಹಠಾತ್ ಕುಸಿದು ಬಿದ್ದಿದ್ದು, ವಿಡಿಯೋಗಳು ಬೆಳಕಿಗೆ ಬಂದಿವೆ. ಈ ಘಟನೆಯಲ್ಲಿ ಎರಡು ಟ್ರಕ್‌ಗಳು, ಎರಡು ವ್ಯಾನ್‌ಗಳು ಸೇರಿದಂತೆ ಹಲವು ವಾಹನಗಳು ನದಿಗೆ ಬಿದ್ದು ಕನಿಷ್ಠ 10 ಜನರು ಅಸುನೀಗಿದ್ದಾರೆ. ಸೇತುವೆ ಕುಸಿತದ ನಂತರ ವಡೋದರಾ ಮತ್ತು ಆನಂದ್ ಸಂಪರ್ಕಿಸುವ ಸೇತುವೆಯ ಅಂಚಿನಲ್ಲಿ ಟ್ಯಾಂಕರ್ ನೇತಾಡುತ್ತಿರುವುದು ಕಂಡುಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

ಆರಂಭಿಕ ವರದಿಗಳ ಪ್ರಕಾರ, ಎರಡು ಟ್ರಕ್‌ಗಳು, ಒಂದು ಬೊಲೆರೊ SUV ಮತ್ತು ಒಂದು ಪಿಕಪ್ ವ್ಯಾನ್ ಸೇರಿದಂತೆ ನಾಲ್ಕು ವಾಹನಗಳು ಸೇತುವೆಯನ್ನು ದಾಟುತ್ತಿದ್ದಾಗ ಅದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.

https://www.ndtv.com/video/video-shows-vehicles-in-river-after-deadly-gujarat-bridge-collapse-963516

ಇದನ್ನೂ ಓದಿ: RSS: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಸದ್ದಿಲ್ಲದೇ ಮಾನದಂಡ ರೂಪಿಸಿದ RSS !! ಏನೇನಿದೆ ಗೊತ್ತಾ?

You may also like