4
ವೇಣೂರು: ನೈನಾಡಿನ ಸ್ನೇಹಗಿರಿ ಪರಿಸರದ ಸಮೀಪದ ಕಾಡಿನಲ್ಲಿ ಚಿರತೆಯೊಂದು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯಲ್ಲಿ ಚಿಕಿತ್ಸೆಗೆ ಒಳಪಡಿಸಿದ್ದು, ಇದೀಗ ಚಿರತೆ ಚೇತರಿಸಿಕೊಂಡಿದೆ.
ಸ್ಥಳೀಯರ ಮಾಹಿತಿಯ ಮೇರೆಗೆ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ಮಾಡಿ ಅರವಳಿಕೆ ನೀಡಿ ಚಿಕಿತ್ಸೆಗಾಗಿ ಚಿರತೆಯನ್ನು ಕೊಂಡೊಯ್ಯಲಾಗಿದೆ.
ಚಿರತೆಯ ಓಡಾಡುವಿಕೆ ನೈನಾಡು, ಹೊಸಪಟ್ಣ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಚಿರತೆ ಹಿಡಿಯುವ ಬೋನನ್ನು ಸ್ನೇಹಗಿರಿ ಪರಿಸರದ ವ್ಯಾಪ್ತಿಯಲ್ಲಿ ಅಳವಡಿಸಿದ್ದರು.
ನೈನಾಡು ಶ್ರೀ ರಾಮ ಯುವಕ ಸಂಘದ ಸದಸ್ಯರುಗಳಾದ ಶೇಖರ ಕಲ್ಲು, ಪ್ರಶಾಂತ್ ಕಲ್ಲು, ಗಣೇಶ್ ಮಿತ್ತಬೆಟ್ಟು, ಚಂದ್ರಹಾಸ ಅಚ್ಚಿನಡ್ಕ, ಚಂದ್ರ ಬೆಂಚಿನಡ್ಕ, ರಿಯಾಜ್ ಸ್ನೇಹಗಿರಿ, ಖಿಲ್ ಕಮಂಗಿಲ್ ಮುಂತಾದವರು ಬೋನು ಅಳವಡಿಸಲು ಸಹಾಯ ಮಾಡಿದ್ದರು.
