Home » Karkala: ಕಾರ್ಕಳ:ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ: ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನ!

Karkala: ಕಾರ್ಕಳ:ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ: ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನ!

0 comments
Crime News Bangalore

Karkala: ಕಾರ್ಕಳ (Karkala) ಬೈಲೂರು ಸಮೀಪದ ಕೌಡೂರು ರಂಗನಪಲ್ಕೆ ಎಂಬಲ್ಲಿ ಎರಡು ಗುಂಪುಗಳ ನಡುವಿನ ವೈಷಮ್ಯದ ಕಾರಣದಿಂದ ಮಾತಿಗೆ ಮಾತು ಬೆಳೆದು ಯುವಕನಿಗೆ ತಲವಾರಿನಿಂದ ಹಲ್ಲೆಗೆ ಯತ್ನಿಸಿ ಜಾತಿ ನಿಂದನೆಗೈದ ಆರೋಪದ ಮೇಲೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಡೂರು ಗ್ರಾಮದ ಚರಣ್(22) ಹಾಗೂ ಆರೋಪಿಗಳಾದ ವಿಷ್ಣು ಮತ್ತು ಅಶ್ವಿನ್ ಎಂಬವರ ನಡುವೆ ಜೂ 21 ರಂದು ಬೈಲೂರಿನ ಪಳ್ಳಿ ಕ್ರಾಸ್ ಬಳಿ ರಾತ್ರಿ 8.30ರ ಸುಮಾರಿಗೆ ಜಗಳವಾಗಿತ್ತು. ಈ ಜಗಳದ ನಂತರ ವೈಯುಕ್ತಿಕ ದ್ವೇಷದಿಂದ ಅಶ್ವಿನ್ ಎಂಬಾತ ಚರಣ್ ಮೊಬೈಲ್ ಗೆ ಕರೆ ಮಾಡಿ ಅವಾಚ್ಯವಾಗಿ ಬೈದು ಬಳಿಕ ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಬಳಿಕ ಮತ್ತೆ ಮತ್ತೆ ಚರಣ್ ಗೆ ಕಾಲ್ ಮಾಡಿ ಜೋಡು ರಸ್ತೆಗೆ ಬರುವಂತೆ ಬೆದರಿಕೆಯೊಡ್ಡಿದ್ದ. ಕೊನೆಗೂ ಚರಣ್ ಜೂ 22 ರಂದು ಭಾನುವಾರ ರಾತ್ರಿ 7.45ರ ವೇಳೆಗೆ ತನ್ನ ಚಿಕ್ಕಪ್ಪ ಜಗನ್ನಾಥ್‌, ಸುಂದ‌ರ್, ಕಿರಣ್, ರವಿ ಮತ್ತು ಕಿರಣ್ ಎಂಬವರೊಂದಿಗೆ ರಂಗಪಲ್ಕೆಯ ಕೀರ್ತಿ ಬಾರ್ ಬಳಿ ನಿಂತುಕೊAಡಿದ್ದಾಗ ಅಲ್ಲಿಗೆ ಆರೋಪಿಗಳಾದ ಬೈಲೂರಿನ ಸುಜಿತ್‌, ವಿಷ್ಣು ಅಶ್ವಿನ್, ಮಂಜುನಾಥ ಜಾರ್ಕಳ, ಯಶವಂತ್ ಹಾಗೂ ಇತರರು ಬೈಕಿನಲ್ಲಿ ಬಂದು ಚರಣ್‌ ಜತೆ ಗಲಾಟೆ ಮಾಡಿದ್ದಾರೆ.

ಈ ವೇಳೆ ವಿಷ್ಣು ಎಂಬಾತನು ಚರಣ್ ಗೆ ತಲವಾರಿನಿಂದ ಹೊಡೆಯಲು ಬಂದಿದ್ದು, ಜಗನ್ನಾಥ್ ಮತ್ತು ಸುಂದರ್ ರವರು ತಡೆಯಲು ಹೋದಾಗ, ವಿಷ್ಣು ಜಗನ್ನಾಥ್‌ರವರಿಗೆ ಮುಖಕ್ಕೆ ಕೈಯಿಂದ ಹೊಡೆದ ಪರಿಣಾಮ ಎಡಬದಿಯ ಹಲ್ಲು ಮುರಿದಿದ್ದು, ಆಪಾದಿತರಾದ ಸುಜಿತ್ ಮತ್ತು ವಿಷ್ಣು ರವರು ಸುಂದ‌ರ್ ರವರಿಗೆ ಕೈಯಿಂದ ಎದೆಗೆ ಹೊಡೆದಿದ್ದಾರೆ ಎಂದು ಚರಣ್ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Moodabidri: 36 ವರ್ಷಗಳ ನಂತರ ತಾಯಿ ಬಳಿಗೆ ಬಂದ ಮಗ: ನಿಜವಾದ ಮಂತ್ರದೇವತೆಯ ನುಡಿ

You may also like