Home » Mangalore: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಕಟರಮಣ ಭಟ್‌ (92) ನಿಧನ

Mangalore: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಕಟರಮಣ ಭಟ್‌ (92) ನಿಧನ

0 comments

Mangalore: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಕಟರಮಣ ಭಟ್‌ (92) ಅವರು ತಮ್ಮ ಉಪ್ಪಿನಂಗಡಿಯ ತಮ್ಮ ಸ್ವಗೃಹದಲ್ಲಿ ಇಂದು (ಜು.19) ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.

ಹಿರಿಯ ಪುತ್ರ, ಯಕ್ಷಗಾನ ಕಲಾವಿದ ಅಂಬಾಪ್ರಸಾದ್‌ ಪಾತಾಳ, ಕಿರಿಯ ಪುತ್ರ ಉಪ್ಪನಂಗಡಿ ಸಿ.ಎ.ಬ್ಯಾಂಕ್‌ ನಿರ್ದೇಶಕ ಶ್ರೀರಾಮ ಭಟ್‌ ಪಾತಾಳ ಸಹಿತ ನಾಲ್ವರು ಪುತ್ರಿಯರು ಹಾಗೂ ಮೊಮ್ಮಕ್ಕಳು, ಅಪಾರ ಬಂಧುಗಳನ್ನು, ಅಭಿಮಾನಿಗಳನ್ನು ಅಗಲಿದ್ದಾರೆ.

1951 ರಲ್ಲಿ ಜೀವನೋಪಾಯಕ್ಕೆಂದು ಕಾಂಚನ ನಾಟಕ ಕಂಪನಿಯಲ್ಲಿ ಅಡುಗೆಯವರಾಗಿ ಸೇರಿ ನಂತರ ಪ್ರಧಾನ ಸ್ತ್ರೀ ವೇಷಧಾರಿಯಾಗಿ ಅವಕಾಶ ಪಡೆದು ವೈವಿಧ್ಯಮಯ ವೇಷಗಳಲ್ಲಿ ಮೆರೆಯ ಹಿರಿಯ ಕಲಾವಿದ ಪಾತಾಳ ವೆಂಕಟರಮಣ ಭಟ್ಟರು.

ಇದನ್ನೂ ಓದಿ: Govt Hospital: ಬಾಗಿಲು ಮುಚ್ಚುವ ಸ್ಥಿತಿಯಲ್ಲಿ ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರ – ಇದ್ದ ಇಬ್ಬರೂ ಖಾಯಂ ವೈದ್ಯರುಗಳು ವರ್ಗಾವಣೆ

You may also like