Home » ಬಸ್ ಚಲಾಯಿಸುವಾಗ ಚಾಲಕನಿಗೆ ಹಠಾತ್ ಹೃದಯಾಘಾತ; ಮುಂದೇನಾಯ್ತು?

ಬಸ್ ಚಲಾಯಿಸುವಾಗ ಚಾಲಕನಿಗೆ ಹಠಾತ್ ಹೃದಯಾಘಾತ; ಮುಂದೇನಾಯ್ತು?

by ಹೊಸಕನ್ನಡ
0 comments

ಮಧ್ಯ ಪ್ರದೇಶ ಜಬಲ್ಪುರದಲ್ಲಿ ಗುರುವಾರ ಬಸ್‌ ಚಲಾಯಿಸುವ ಸಂದರ್ಭ ಚಾಲಕನಿಗೆ ಹೃದಯಾಘಾತವಾಗಿದ್ದು, ಪರಿಣಾಮ ಬಸ್ ಎರಡು ವಾಹನಗಳಿಗೆ ಢಿಕ್ಕಿ ಹೊಡೆದು ಇಬ್ಬರು ಸಾವಿನ ದವಡೆಗೆ ಸಿಲುಕಿರುವ ಘಟನೆ ಬೆಳಕಿಗೆ ಬಂದಿದೆ.

ಸಿಟಿ ಬಸ್‌ ವೊಂದು ಮಾರ್ಗದಲ್ಲಿ ಬರುವ ವೇಳೆ ಜಬಲ್ಪುರ ಟ್ರಾಫಿಕ ಸಿಗ್ನಲ್‌ ಬಳಿ ಒಮ್ಮೆಗೆ ಅಡ್ಡಾದಿಡ್ಡಿಯಾಗಿ ಬಂದ ಸಂದರ್ಭ ಪಕ್ಕದಲ್ಲಿರುವ ರಿಕ್ಷಾವೊಂದಕ್ಕೆ ಢಿಕ್ಕಿಯಾದ ಬಳಿಕ, ಬಸ್ ಬ್ರೇಕ್‌ ಫೇಲ್‌ ಆದ ರೀತಿ ಟ್ರಾಫಿಕ್‌ ಸಿಗ್ನಲ್‌ ಬಳಿ ನಿಂತಿದ್ದ ವಾಹನಗಳಿಗೆ ಢಿಕ್ಕಿ ಹೊಡೆದು ಬಸ್ಸಿನಡಿ ಬಿದ್ದ ಪರಿಣಾಮ ಇಬ್ಬರು ಸವಾರರು ಸ್ಥಳದಲ್ಲೇ ಅಂತ್ಯ ಕಂಡಿದ್ದಾರೆ.

ಇನ್ನುಳಿದವರು ಗಾಯಗೊಂಡಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದ್ದು, ಸ್ಥಳಕ್ಕೆ ಬಂದ ಪೊಲೀಸರು, ಪ್ರಜ್ಞಾಹೀನ ಸ್ಥಿತಿಯಲ್ಲಿ ಸ್ಟೇರಿಂಗ್‌ ಮೇಲೆ ಬಿದ್ದಿದ್ದ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇವರನ್ನು ವೈದ್ಯರು ಪರೀಕ್ಷಿಸಿದಾಗ ಚಾಲಕನಿಗ ಹಠಾತ್‌ ಹೃದಯಾಘಾತವಾಗಿ, ಅವರು ಸಾವನ್ನಪ್ಪಿದ್ದಾರೆ ಎಂಬುದು ತಿಳಿದು ಬಂದಿದೆ.

You may also like

Leave a Comment