Home » Vinayakan: ‘ಜೈಲರ್’ ಸಿನಿಮಾ ನಟನ ಅಸಭ್ಯ ವರ್ತನೆಯ ವಿಡಿಯೋ ವೈರಲ್- ಭಾರೀ ಆಕ್ರೋಶ!!

Vinayakan: ‘ಜೈಲರ್’ ಸಿನಿಮಾ ನಟನ ಅಸಭ್ಯ ವರ್ತನೆಯ ವಿಡಿಯೋ ವೈರಲ್- ಭಾರೀ ಆಕ್ರೋಶ!!

0 comments

Vinayakan: ಜೈಲರ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ನಟ ವಿನಾಯಕನ್(Vinayakan) ಕುಡಿದ ಮತ್ತಿನಲ್ಲಿ ಬಾಲ್ಕನಿಯಲ್ಲಿ ಅರೆನಗ್ನನಾಗಿ ಅಸಭ್ಯ ವರ್ತನೆ ತೋರಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ಸದಾ ಒಂದಲ್ಲಾ ಒಂದು ಕಾರಣಕ್ಕೆ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ವಿನಾಯಕನ್ ಇದೀಗ ನೆರೆಮನೆಯವರ ಎದುರು ಅಶ್ಲೀಲವಾಗಿ ವರ್ತಿಸಿದ್ದು ಸದ್ಯ ನಟನ ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಲ್ಲದೆ ಜೈಲರ್ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದ ಅವರ ಅಭಿನಯ ನೋಡಿ ಚಿತ್ರರಂಗಕ್ಕೊಬ್ಬ ಖಡಕ್ ವಿಲನ್ ಸಿಕ್ಕಿದ್ದಾನೆ ಎಂದು ಮೆಚ್ಚಿಕೊಂಡಿದ್ದರು. ಆದರೆ ನಿಜ ಜೀವನದಲ್ಲೂ ಅವರು ಬೇಡದ ಕಾರಣಗಳಿಂದಲೇ ಸುದ್ದಿಯಾಗುತ್ತಿರುವುದು ವಿಪರ್ಯಾಸ. ಕುಡಿದ ಮತ್ತಿನಲ್ಲಿ ತಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವೇ ಇಲ್ಲದೇ ಅಸಭ್ಯ ವರ್ತನೆ ತೋರಿದ್ದಾರೆ.

ವಿಡಿಯೋದಲ್ಲಿ ಏನಿದೆ?
ವಿನಾಯಕನ್ ನೆರೆಮನೆಯವರಿಗೆ ಬೈಯುತ್ತಾ ಅಶ್ಲೀಲವಾಗಿ ನಡೆದುಕೊಂಡಿರುವ ವಿಡಿಯೋ ವೈರಲ್ ಆಗಿದ್ದು ಅನೇಕರು ವಿನಾಯಕನ್ ಅವರ ವರ್ತನೆಯನ್ನು ಟೀಕಿಸಿದ್ದಾರೆ. ಮನೆಯ ಬಾಲ್ಕನಿಯಲ್ಲಿ ನೆರೆಮನೆಯವರಿಗೆ ಅಶ್ಲೀಲ ಪದಗಳಿಂದ ವಿನಾಯಕನ್ ನಿಂದಿಸಿದ್ದಾರೆ. ಈ ವೇಳೆ, ಸೊಂಟದ ಮೇಲಿಂದ ಲುಂಗಿ ಬಿದ್ದು ಹೋಗಿದ್ರೂ ಲೆಕ್ಕಿಸದೇ ಕುಡಿದು ಜಗಳಕ್ಕೆ ನಿಂತಿದ್ದಾರೆ

ಇನ್ನು ವಿಶೇಷವೆಂದರೆ ತಮ್ಮ ವರ್ತನೆಯನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಸಿನಿಮಾ ನಟನಾಗಿ ಎಷ್ಟೋ ವಿಷಯಗಳನ್ನು ನಿಭಾಯಿಸಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನಿಂದಾಗಿ ನೆಗೆಟಿವ್ ವಾತಾವರಣ ಉಂಟಾಗಿದ್ದಕ್ಕೆ ಜನರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.

You may also like