Viral video: ಆಂಧ್ರ ಪ್ರದೇಶದ ವೈಸಿಪಿ ಶಾಸಕನ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಚ್ಚರಿ ಎಂದರೆ ಆ ವಿಡಿಯೋವನ್ನು ಆ ಶಾಸಕನೇ ಹರಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಆಂಧ್ರ ಪ್ರದೇಶದ ಅನಂತಪುರದ ಶಿಂಗನಮಲ ಕ್ಷೇತ್ರದ ವೈಸಿಪಿ ಪಕ್ಷದ ಶಾಸಕ ಫಣೀಂದ್ರ ಎಂದು ಹೇಳಲಾಗಿದೆ. ಈ ಫಣೀಂದ್ರ ವೈಸಿಪಿ ಪಕ್ಷದ ಬಿಸಿ ಸೆಲ್ ಅಧ್ಯಕ್ಷರೂ ಕೂಡ ಆಗಿದ್ದು, ಇದೇ ಶಾಸಕನ ವಿವಾಹೇತರ ಸಂಬಂಧದ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ಶಾಸಕ ಫಣೀಂದ್ರ ಶಿಕ್ಷಕಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದು, ಇಷ್ಟು ದಿನ ಗುಟ್ಟಾಗಿ ಸಾಗುತ್ತಿದ್ದ ಇವರ ವ್ಯವಹಾರ ಇತ್ತೀಚೆಗೆ ವೈರಲ್ ಆದ ವಿಡಿಯೋ ಮೂಲಕ ಬಟಾಬಯಲಾಗಿತ್ತು. ಇನ್ನೂ ಅಚ್ಚರಿ ಎಂದರೆ ಈ ವಿಡಿಯೋದಲ್ಲಿರುವ ಶಾಸಕನೇ ಈ ವಿಡಿಯೋವನ್ನು ವಾಟ್ಸಪ್ ನಲ್ಲಿ ಶೇರ್ ಮಾಡಿದ್ದಾನೆ ಎನ್ನಲಾಗಿದೆ.ಇನ್ನು ಶಾಸಕ ಫಣೀಂದ್ರ ತಮ್ಮ ಖಾಸಗಿ ವಿಡಿಯೋವನ್ನು ವೈಸಿಪಿ ಪಕ್ಷದ ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫಣೀಂದ್ರ ಯಾವುದೋ ವಿಡಿಯೋ ಶೇರ್ ಮಾಡಲು ಹೋಗಿ ತಮ್ಮ ಖಾಸಗಿ ವಿಡಿಯೋ ಶೇರ್ ಮಾಡಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗುತ್ತಲೇ ಶಾಸಕ ಫಣೀಂದ್ರ ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆಯಾದರೂ ಅಷ್ಟು ಹೊತ್ತಿಗಾಗಲೇ ಅದನ್ನು ಗ್ರೂಪ್ ನ ಇತರೆ ಸದಸ್ಯರು ಬೇರೆಯವರಿಗೆ ಫಾರ್ವರ್ಡ್ ಮಾಡಿದ್ದಾರೆ.
