Home » ಮತ್ತೆ ಶುರುವಾಗಲಿದೆ ವಿಧಾನಸಭಾ ಅಧಿವೇಶನ!!ಈ ಬಾರಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಚರ್ಚೆಯಾಗಲಿದೆಯೇ ತೈಲ ಬೆಲೆ ಏರಿಕೆ,ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ|

ಮತ್ತೆ ಶುರುವಾಗಲಿದೆ ವಿಧಾನಸಭಾ ಅಧಿವೇಶನ!!ಈ ಬಾರಿ ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಚರ್ಚೆಯಾಗಲಿದೆಯೇ ತೈಲ ಬೆಲೆ ಏರಿಕೆ,ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿ|

0 comments

ಮಹಾಮಾರಿಯಿಂದಾಗಿ ನಿಂತುಹೋಗಿದ್ದ ವಿಧಾನಸಭೆ ಅಧಿವೇಶನ ಬರೋಬ್ಬರಿ ಆರು ತಿಂಗಳುಗಳ ಭರ್ಜರಿ ಅಂತರದ ಬಳಿಕ ಮತ್ತೆ ಶುರುವಾಗಲಿದ್ದು, ಈ ಬಾರಿ ಸುಮಾರು ಹತ್ತು ದಿನಗಳ ಕಾಲ ಅಧಿವೇಶನ ನಡೆಯಲಿದ್ದು ಆನ್ ಲೈನ್ ಜೂಜಾಟ ಹಾಗೂ ಪೊಲೀಸ್ ಕಾಯಿದೆ 1963 ರ ತಿದ್ದುಪಡಿ ಸಹಿತ 18ಕ್ಕೂ ಮಿಕ್ಕಿ ಮಸೂದೆಗಳ ಮಂಡನೆಗೆ ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು, ಇತ್ತ ವಿಧಾನ ಸಭಾ ಪ್ರತಿಪಕ್ಷಗಳ ನಾಯಕರು ಸರ್ಕಾರವನ್ನು ಕೆಲ ವಿಷಯದಲ್ಲಿ ತೀವ್ರ ತರಾಟೆಗೆ ತೆಗೆದುಕೊಳ್ಳುವ ತಂತ್ರ ರೂಪಿಸಿದೆ.

ಈ ಅಧಿವೇಶನದಲ್ಲಿ ಸಾಕಷ್ಟು ಸಮಯವನ್ನು ಪ್ರತಿ ಪಕ್ಷಗಳ ಮಾತಿಗೆ ಮೀಸಲಿರಿಸಲಾಗಿದ್ದು, ಚರ್ಚೆ ನಡೆಯುವ ವೇಳೆ ಅಧಿವೇಶನದಿಂದ ಉದ್ದೇಶಪೂರ್ವಕವಾಗಿ ಹೊರನಡೆಯುವುದು ಬೇಡ, ಈಗಾಗಲೇ ಮಾನ್ಯ ಸ್ಪೀಕರ್ ವಿಶ್ವೇಶ್ವರ ಕಾಗೇರಿ ಯವರು ಎಲ್ಲಾ ಶಾಸಕ, ಸಚಿವರ ಸಹಿತ ನಾಯಕರುಗಳಿಗೆ ಅಧಿವೇಶನಕ್ಕೆ ಗೈರಾಗದಿರಲು ಪತ್ರ ಬರೆದಿದ್ದಾರೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ ಪತ್ರಿಕಾ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಇನ್ನು ಅಧಿವೇಶನದಲ್ಲಿ ಸರ್ಕಾರ ಮಹಾಮಾರಿಯ ಬಗೆಗೆ ಕೈಗೊಂಡಿರುವ ಕ್ರಮ, ತೈಲ ಬೆಲೆ ಏರಿಕೆಯ, ರಾಷ್ಟ್ರೀಯ ಶಿಕ್ಷಣ ನೀತಿಯ ಬಗೆಗೂ ಚರ್ಚೆ ನಡೆಯಲಿದ್ದು,ಅಧಿವೇಶನಕ್ಕೆ ಬರುವ ಮಾಧ್ಯಮ ವರದಿಗಾರರ ಸಹಿತ ವಿಧಾನಸಭಾ ಸದಸ್ಯರು ಆರ್ -ಟಿ ಪಿ.ಸಿ.ಆರ್ ವರದಿ ಸಲ್ಲಿಸಬೇಕಾಗಿದೆ.

You may also like

Leave a Comment