Assam: ಅಸ್ಸಾಂ ನ ಗ್ರಾಮವೊಂದರಲ್ಲಿ ಗುಂಪೊಂದು ದಂಪತಿಯನ್ನು ಹರಿತವಾದ ಆಯುಧಗಳಿಂದ ಹೊಡೆದು ಜೀವಂತವಾಗಿ ಸುಟ್ಟುಹಾಕಿದ ಅಮಾನುಷ ಘಟನೆಯೊಂದು ನಡೆದಿದೆ. ಇದರ ಹಿಂದಿನ ಕಾರಣ ಮಾತ್ರ ಭಯಂಕರವಾಗಿದೆ.
ಹೌದು, ಆಂಗ್ಲಾಂಗ್ ಜಿಲ್ಲೆಯಲ್ಲಿ ಗ್ರಾಮಸ್ಥರ ಗುಂಪೊಂದು ತಮ್ಮ ಗ್ರಾಮದಲ್ಲಿ ದಂಪತಿಯೊಂದು ಯಾರಿಗೂ ತಿಳಿಯದೆ ಮಾಟ ಮಂತ್ರವನ್ನು ನಡೆಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಹಿಗ್ಗ ಮುಗ್ಗ ತಳಿಸಿ ಜೀವಂತವಾಗಿ ಅವರನ್ನು ಸುಟ್ಟುಬಿಟ್ಟಿದೆ. ಮೃತರನ್ನು ಗಾರ್ಡಿ ಬಿರೋವಾ (43) ಮತ್ತು ಅವರ ಪತ್ನಿ ಮೀರಾ ಬಿರೋವಾ (33) ಎಂದು ಗುರುತಿಸಲಾಗಿದೆ.
ಗ್ರಾಮಸ್ಥರೆಲ್ಲರೂ ಸೇರಿಕೊಂಡು ದಂಪತಿಗಳು ಮಾಟಮಂತ್ರದಲ್ಲಿ ತೊಡಗಿದ್ದಾರೆಂದು ಶಂಕಿಸಿದ್ದರು. ಇದರಿಂದಾಗಿ ಆ ಊರಿನಲ್ಲಿ ಕೆಟ್ಟ ಘಟನೆಗಳು ಮತ್ತು ಅನಾರೋಗ್ಯ ಉಂಟಾಗಿದೆ ಎಂಬುದು ಅವರ ನಂಬಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಜರ್ಜರಿತವಾಗಿ ತಿಳಿಸಿ ಬೆಂಕಿ ಹಚ್ಚಿ ಸುಟ್ಟುಕೊಂದಿದ್ದಾರೆ.
ಈ ಕೃತ್ಯ ಎಸಗಲು ಬಹುತೇಕ ಇಡೀ ಗ್ರಾಮದ ಜನರು ಒಗ್ಗೂಡಿದ್ದರು. ಹೀಗಾಗಿ ಅವರು ಯಾರೂ ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ನಮ್ಮ ಆರಂಭಿಕ ತನಿಖೆಯ ಪ್ರಕಾರ, ಪತಿ ಮತ್ತು ಪತ್ನಿಯನ್ನು ಮೊದಲು ಥಳಿಸಿ ನಂತರ ಬೆಂಕಿ ಹಚ್ಚಲಾಯಿತು. ಅವರ ಮೂಳೆಗಳನ್ನು ಸಹ ನಮಗೆ ಪಡೆಯಲು ಸಾಧ್ಯವಾಗಲಿಲ್ಲ” ಎಂದು ಕರ್ಬಿ ಅಂಗ್ಲಾಂಗ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಪುಷ್ಪರಾಜ್ ಸಿಂಗ್ ಹೇಳಿದ್ದಾರೆ. ಸಧ್ಯ ಬೆಂಕಿ ಹಚ್ಚಿದ ಎಲ್ಲಾ ಅಪರಾಧಿಗಳನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
