Tahawwur rana: 26/11ರ ಮುಂಬೈ ದಾಳಿಯ ಸಂಚುಕೋರ ತಹವೂರ್ ರಾಣಾನನ್ನು (Tahawwur rana) ಎನ್ ಐ ಎ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಮೂರು ಬೇಡಿಕೆಯನ್ನು ಅಧಿಕಾರಿಯ ಮುಂದೆ ಇಟ್ಟಿದ್ದಾರೆ.
ಅಮೆರಿಕದಿಂದ ಕರೆತಂದ ಬಳಿಕ ರಾಣಾನನ್ನು ನವದೆಹಲಿಯ ಸಿಜಿಒ ಕಾಂಪ್ಲೆಕ್ಸ್ ನಲ್ಲಿರುವ ಎನ್‌ಐಎ ಪ್ರಧಾನ ಕಚೇರಿಯ ಸೀಕ್ರೆಟ್ ಸೆಲ್ ನಲ್ಲಿ ಇರಿಸಲಾಗಿದ್ದು, ಕಚೇರಿಯ ಸುತ್ತ ಬಿಗಿ ಭದ್ರತೆ ನೀಡಲಾಗಿದೆ.ಇನ್ನು ಜೈಲಿನಲ್ಲೇ ರಾಣಾ ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಕುರಾನ್ ಪ್ರತಿಯನ್ನು ನೀಡುವಂತೆ ಅಧಿಕಾರಿಗಳ ಬಳಿ ವಿನಂತಿಸಿದ್ದಾರೆ. ಇದರ ಜೊತೆಗೆ
ಒಂದು ಪೆನ್ ಹಾಗೂ ಕಾಗದ ನೀಡುವಂತೆ ಬೇಡಿಕೆ ಇಟ್ಟಿದ್ದು, ಪೆನ್ ನೀಡಿದರೆ ಅದರಿಂದ ಹಾನಿ ಮಾಡಿಕೊಳ್ಳಲು ಬಳಸಿಕೊಳ್ಳುವುದಿಲ್ಲ ಎಂದು ಖಚಿತ ಪಡಿಸಿಕೊಳ್ಳಲು ಅಧಿಕಾರಿಗಳು ನಿಕಟ ಸಂಬಂಧದಲ್ಲಿದ್ದಾರೆ ಎನ್ನಲಾಗಿದೆ.
