Home » Viral News: ನ್ಯೂ ಡೆಲ್ಲಿ ಡಿಜಿಟಲ್ ಜಾಹೀರಾತು ಫಲಕದಲ್ಲಿ ಪ್ರಸಾರವಾಗಿಬಿಟ್ಟ ಸೆಕ್ಸ್‌ ವೀಡಿಯೋ- ಮಹಿಳೆಯರು ನಾಚಿಕೆಯಿಂದ….!

Viral News: ನ್ಯೂ ಡೆಲ್ಲಿ ಡಿಜಿಟಲ್ ಜಾಹೀರಾತು ಫಲಕದಲ್ಲಿ ಪ್ರಸಾರವಾಗಿಬಿಟ್ಟ ಸೆಕ್ಸ್‌ ವೀಡಿಯೋ- ಮಹಿಳೆಯರು ನಾಚಿಕೆಯಿಂದ….!

0 comments

Viral News: ದೆಹಲಿ: ರಾಷ್ಟ್ರ ರಾಜಧಾನಿಯ (Delhi) ಅತ್ಯಂತ ನಿಬಿಡ ಮಾರುಕಟ್ಟೆಗಳಲ್ಲಿ ಒಂದಾದ ದೆಹಲಿಯ ಕನ್ನಾಟ್ ಪ್ಲೇಸ್‍ನ ಡಿಜಿಟಲ್ ಜಾಹೀರಾತು ಫಲಕದಲ್ಲಿ (obscene video Digital Advertisement Board) ಸೆಕ್ಸ್ ವೀಡಿಯೊ ಒಂದು ಪ್ರಸಾರ ಮಾಡಲಾಗಿದೆ. ಮಾರುಕಟ್ಟೆಯ ಹೆಚ್-ಬ್ಲಾಕ್‍ನಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ. ಆ ವಿಡಿಯೋ ನೋಡಿ ಅಲ್ಲಿಂದ ಮಹಿಳೆಯರು ನಾಚಿಕೆಯಿಂದ ಮುಖ ಮುಚ್ಚಿಕೊಂಡಿದ್ದಾರೆ.

ಈ ರೀತಿಯ ಚಿತ್ರ ಪ್ರಸಾರವಾದ ತಕ್ಷಣ ವ್ಯಕ್ತಿಯೊಬ್ಬ ಜಾಹೀರಾತು ಫಲಕವನ್ನು ವೀಡಿಯೋ ಮಾಡಿಕೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಕೆಲವು ಸೆಕೆಂಡುಗಳ ಕಾಲ ಪ್ಲೇ ಆಗಿದ್ದ ಕ್ಲಿಪ್‍ನ್ನು ನವದೆಹಲಿ ಮುನ್ಸಿಪಲ್ ಅಧಿಕಾರಿಗಳ ಸಹಾಯದಿಂದ ತೆಗೆದುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು ಫಲಕವು ಗುಣಮಟ್ಟದ್ದಾಗಿದ್ದು ಇದರೊಂದಿಗೆ ಫೈರ್ ವಾಲ್ ಮತ್ತು ಆಂಟಿ ವೈರಸ ಇದ್ದು ಅದು ಸಂಪೂರ್ಣವಾಗಿ ಸುರಕ್ಷಿತವಾಗಿರುವ ಸರ್ವರನಿಂದ ನಿಯಂತ್ರಿಸಲ್ಪಡುತ್ತವೆ. ಆದರೂ ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಜಾಹೀರಾತು ಫಲಕವನ್ನು ಹ್ಯಾಕ್ ಮಾಡಿರುವ ಸಾಧ್ಯತೆ ಇದೆ ಎಂದು ಅಲ್ಲಿನ ಅಧಿಕಾರಿಗಳು ಶಂಕಿಸಿದ್ದಾರೆ.

ಈ ರೀತಿಯ ಪ್ರಕರಣ ಇದೇ ಮೊದಲಲ್ಲ. ಕಳೆದ ವರ್ಷ ಬಿಹಾರದಲ್ಲಿ ಇಂಥದ್ದೇ ಘಟನೆ ಸಂಭವಿಸಿದ್ದು, ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ಜಾಹೀರಾತುಗಳಿಗಾಗಿ ಡಿಸ್ಪ್ಲೇಯಲ್ಲಿ ಸೆಕ್ಸ್ ವೀಡಿಯೋ ಕ್ಲಿಪ್‍ನ್ನು ಪ್ಲೇ ಆಗಿತ್ತು. ಬಳಿಕ ರೈಲ್ವೆ ರಕ್ಷಣಾ ಪಡೆ ಮಧ್ಯ ಪ್ರವೇಶಿಸಿ ದೃಶ್ಯಾವಳಿಗಳನ್ನು ನಿಲ್ಲಿಸಿತ್ತು.

You may also like

Leave a Comment