Viral News: ತನ್ನ ಸತ್ತ ಹೆಂಡತಿಗೆ ಗಂಡನೋರ್ವ ವರ್ಶಾಂತರಗಳ ಕಾಲ ಮೆಸ್ಸೇಜ್ ಹಾಕುತ್ತಲೇ ಇದ್ದ. ಆದರೆ, ಅದೊಂದು ದಿನ ರಿಪ್ಲೈ ಬಂದೇ ಬಿಡ್ತು. ಅಬ್ಬಾ!!! ಸತ್ತಿರುವವರ ಮೊಬೈಲ್ ಗೆ ಮೆಸೇಜ್ ಮಾಡಿದ್ರೆ ರಿಪ್ಲೈ ಮಾಡ್ತಾರಾ? ಎಂಬ ಪ್ರಶ್ನೆ ಕಾಡಬಹುದು. ಆದರೆ, ಸದ್ಯ ಬೆಳಕಿಗೆ ಬಂದಿರುವ ವಿಚಾರ ಆಶ್ಚರ್ಯಕರವಾಗಿದೆ (Viral News).
ಹೌದು, ಬ್ರಿಟನ್ನಿನ ವ್ಯಕ್ತಿಯೋರ್ವ ತನ್ನ ಹೆಂಡತಿಯ ಮರಣದ ನಂತರ ಆಕೆಯ ಅಗಲುವಿಕೆಯನ್ನು ಸಹಿಸಲಾಗದೆ, ಆಕೆಯನ್ನು ಮರೆಯಲಾಗದೆ ಹೆಂಡತಿಯ ನೆನಪಿಗಾಗಿ ಅವಳ ಮೊಬೈಲ್ ಸಂಖ್ಯೆಗೆ ಸಂದೇಶಗಳನ್ನು ಕಳುಹಿಸತ್ತಿದ್ದನು. ವರ್ಷಗಳೇ ಉರುಳಿದರೂ ಅತ್ತೆ ಕಡೆಯಿಂದ ಯಾವುದೇ ರಿಪ್ಲೇ ಬರಲಿಲ್ಲ. ಆದರೆ, ಒಂದು ದಿನ ತಮ್ಮ ಪತ್ನಿಯ ಮೊಬೈಲ್ ಸಂಖ್ಯೆಯಿಂದ ಈತನಿಗೆ ರಿಪ್ಲೈ ಬಂದಿದೆ.
ಅಂದಹಾಗೆ, ಈ ವ್ಯಕ್ತಿ ತನ್ನ ಹೆಂಡತಿಯನ್ನು ನೆನಪಿಟ್ಟುಕೊಳ್ಳುವ ಸಲುವಾಗಿ ಪ್ರತಿವರ್ಷ ತಾಯಂದಿರ ದಿನದಂದು ತನ್ನ ಹೆಂಡತಿಯ ಸಂಖ್ಯೆಗೆ ಹ್ಯಾಪಿ ಮದರ್ಸ್ ಡೇ ಸಂದೇಶವನ್ನು ಕಳುಹಿಸುತ್ತಿದ್ದರು.
ಮೊದಲ ಮೊದಲು ಕೆಲವು ವರ್ಷ ಯಾವುದೇ ರಿಪ್ಲೈ ಬರಲಿಲ್ಲ.
ನಂತರ ಒಂದು ದಿನ ಆ ಸಂಖ್ಯೆಯಿಂದ ರಿಪ್ಲೈ ಬಂತು. ಇದರಿಂದ ವ್ಯಕ್ತಿಗೆ ಭಾರೀ ಆಶ್ಚರ್ಯದ ಜೊತೆಗೆ ಖುಷಿಯಾಯಿತು. ಅವರಿಗೆ ತನ್ನ ತೀರಿ ಹೋದ ಹೆಂಡತಿಯೇ ರಿಪ್ಲೆ ಮಾಡಿದಷ್ಟು ಖುಷಿಯಾಯಿತು.
ತಾಯಿಯ ದಿನದಂದು ಸಂದೇಶವನ್ನು ಸ್ವೀಕರಿಸಿದ ನಂತರ ತನ್ನ ಹೆಂಡತಿಯ ಸಂಖ್ಯೆಯಿಂದ, “ನೀವು ಯಾರು?’ ಎಂಬ ರಿಪ್ಲೈ ಬಂತು.
ವಾಸ್ತವದಲ್ಲಿ ಅವರ ಸಂಖ್ಯೆಯನ್ನು ಬೇರೆಯವರಿಗೆ ಅಲಾಟ್ ಮಾಡಲಾಗಿತ್ತು, ಅವರೇ ರಿಪೈ ಮಾಡಿದ್ದರು. ತಕ್ಷಣ ಆತ ಅವರಿಗೆ ರಿಪ್ಲೆ ಮಾಡಿದ “ಕ್ಷಮಿಸಿ, ಇದು ನನ್ನ ದಿವಂಗತ ಪತ್ನಿಯ ಸಂಖ್ಯೆ, ಅವಳ ನೆನಪಿಗಾಗಿ ನಾನು ಸಂದೇಶ ಕಳಿಸುತ್ತಿದ್ದೆ, ಯಾರೂ ರಿಪ್ಲೆ ಮಾಡಲ್ಲ ಅಂದುಕೊಂಡಿದ್ದೆ, ಕ್ಷಮಿಸಿ, ನಾನು ಇನ್ನು ಮುಂದೆ ಸಂದೇಶ ಕಳಿಸುವುದಿಲ್ಲ, ದೇವರು ನಿಮಗೆ ಒಳ್ಳೆದು ಮಾಡಲಿ” ಎಂದು ಹೇಳಿದರು.
ಇದನ್ನು ಓದಿ: KSRTC ಯಿಂದ ಪುರುಷ, ಮಹಿಳೆ ಇಬ್ಬರಿಗೂ ಭರ್ಜರಿ ಗುಡ್ ನ್ಯೂಸ್ !!
