4
Viral News: ಕ್ಯಾಲಿಫೋರ್ನಿಯಾದಲ್ಲಿ ಸಾಕಿದ ಏಳು ತಿಂಗಳ ನಾಯಿ ಮರಿಯೊಂದು ಮನೆಯಲ್ಲಿ ಚುರುಕಿನಿಂದ ಓಡಾಡುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ನಾಯಿಗೆ ಒಮ್ಮೆಲೇ ಅನಾರೋಗ್ಯ ಉಂಟಾಗಿದೆ. ಮನೆಮಂದಿಗೆ ಏನಾಗಿದೆ ಎಂದು ಗೊತ್ತಾಗಲಿಲ್ಲ. ಏನೋ ಆರೋಗ್ಯ ಸಮಸ್ಯೆ ಇರಬೇಕು ಎಂದು ವೈದ್ಯರ ಬಳಿಗೆ ಹೋಗಿದ್ದಾರೆ. ಅಲ್ಲಿ ನಾಯಿ ಮರಿಯ ಹೊಟ್ಟೆಯನ್ನು ನೋಡಿದ ವೈದ್ಯರಿಗೆ ಮರಿ ಏನನ್ನೋ ನುಂಗಿರಬೇಕು ಎಂದು ಅನುಮಾನ ಹುಟ್ಟಿದೆ. ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ಅನೇಕ ಬಟ್ಟೆಯ ವಸ್ತುಗಳು ಇರುವುದು ಪತ್ತೆಯಾಗಿದೆ.
ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ನಾಯಿ ಮರಿಯ ಹೊಟ್ಟೆಯಲ್ಲಿ 24 ಸಾಕ್ಸ್, ಬಟ್ಟೆ ಸೇರಿ ಮೂವತ್ತಕ್ಕೂ ಹೆಚ್ಚು ವಸ್ತುಗಳನ್ನು ಹೊರತೆಗೆದಿದ್ದಾರೆ.
ನಾಯಿಗೆ ಶಸ್ತ್ರಚಿಕಿತ್ಸೆ ಸಂಪೂರ್ಣಗೊಂಡಿದ್ದು, ಆರೋಗ್ಯವಾಗಿದೆ.
