Viral news: ಮನುಕುಲದ ನಾಶವಾಗುತ್ತದೆ ಎಂಬ ಮಾತು ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದೀಗ ವಿಜ್ಞಾನಿಗಳು ಕೊನೆಗೂ ಮನುಕುಲದ ನಾಶ ಯಾವಾಗ ಎಂಬುದನ್ನು ಕಂಡು ಹಿಡಿದಿದ್ದಾರೆ. ಮಾನವ ಅಸ್ತಿತ್ವತ್ವದ ಕೊನೇ ದಿನಾಂಕ ಯಾವಾಗ ಗೊತ್ತಾ ?! ಇಲ್ಲಿದೆ ನೋಡಿ ಶಾಕಿಂಗ್ (viral news) ಮಾಹಿತಿ!!!.
ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವರದಿಯೊಂದನ್ನು
ಸಿದ್ಧಪಡಿಸಿದ್ದಾರೆ. ಈ ವರದಿಯಲ್ಲಿ ಮನುಷ್ಯರು ಯಾವಾಗ
ಸಾಯುತ್ತಾರೆ ಎಂದು ಹೇಳಲಾಗಿದೆ. ಬ್ರಿಸ್ಟಲ್ ವಿಶ್ವವಿದ್ಯಾಲಯದ ಹಿರಿಯ ಸಂಶೋಧನಾ ಸಹವರ್ತಿ ಮತ್ತು ಲೇಖಕ ಡಾ. ಅಲೆಕ್ಸಾಂಡರ್ ಫಾರ್ನ್ಸ್ ವರ್ತ್, ನಿರಂತರವಾಗಿ ಏರುತ್ತಿರುವ ತಾಪಮಾನ ಮತ್ತು ಅತಿಯಾದ ಶಾಖದಿಂದ ಮನುಷ್ಯರು ಸಾಯುತ್ತಾರೆ ಎಂದು ಹೇಳಿದ್ದಾರೆ. ಅತಿಯಾದ ಶಾಖವು ಸೂಪರ್ ಖಂಡಗಳನ್ನು ಸೃಷ್ಟಿಸುತ್ತದೆ ಮತ್ತು ಜ್ವಾಲಾಮುಖಿ ಸ್ಫೋಟಗಳಿಗೆ ಕಾರಣವಾಗುತ್ತದೆ. ಹಾಗೇ ಮಾನವ ಸಾಯಲು ಇನ್ನೂ ಬಹಳ ಸಮಯವಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 25 ಕೋಟಿ ವರ್ಷಗಳ ನಂತರ ಮಾನವ ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆಗಳಿವೆ.
ಡಾ. ಫಾರ್ನ್ಸವರ್ತ್ ಭವಿಷ್ಯವು ಹೆಚ್ಚಾಗಿ ಅಪಾಯದಲ್ಲಿದೆ ಎಂದು ಹೇಳಿದರು. ಮುಂಬರುವ ಸಮಯದಲ್ಲಿ ಇಂಗಾಲದ ಡೈಆಕ್ಸೆಡ್ ಮಟ್ಟವು ಇಂದಿನಕ್ಕಿಂತ ಎರಡು ಪಟ್ಟು ಹೆಚ್ಚಾಗುತ್ತದೆ. ಸೂರ್ಯನಿಂದ ಸುಮಾರು ಶೇ.2.5ರಷ್ಟು ಹೆಚ್ಚು ವಿಕಿರಣ ಹೊರಸೂಸುವ ಸಾಧ್ಯತೆಯೂ ಇದೆ.
ಗ್ರಹದ ಬಹುತೇಕ ಭಾಗಗಳು 40-70C ನಡುವಿನ ತಾಪಮಾನವನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತಿದೆ. ಹೊಸದಾಗಿ ಹೊರಹೊಮ್ಮುತ್ತಿರುವ ಸೂಪರ್ ಕಾಂಟಿನೆಂಟ್ ಮೂರು ಪಟ್ಟು ಹೆಚ್ಚು ಪರಿಣಾಮಗಳನ್ನು ಬೀರುತ್ತದೆ. ಇದರ ಪರಿಣಾಮದಿಂದ ಆಹಾರದ ಮೂಲಗಳು, ಮತ್ತು ಪರಿಸರದಲ್ಲಿ ನೀರು ಸಪ್ತನಿಗಳಿಗೆ ಕಡಿಮೆಯಾಗುತ್ತದೆ.
ತಾಪಮಾನವು 40 ರಿಂದ 50 ಡಿಗ್ರಿ ಸೆಲ್ಸಿಯಸ್‌ನಷ್ಟಿರುವುದರಿಂದ, ಶಾಖವು ಮನುಷ್ಯರಿಗೆ ಸಹಿಸಲಾರದು ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ, ಈ ಸಮಸ್ಯೆಯು ಸಂಭವಿಸದಂತೆ ತಡೆಯಲು ಒಂದು ಮಾರ್ಗವಿದೆ ಮತ್ತು ಪಳೆಯುಳಿಕೆ ಇಂಧನಗಳ ಬಳಕೆಯನ್ನು ನಿಲ್ಲಿಸುವುದು. ಇದರಿಂದ ಜೀವನದ ಆಯಸ್ಸು ಕಡಿಮೆಯಾಗುತ್ತಿವೆ.
ಇದನ್ನೂ ಓದಿ: Banking exam questions: ಹೊರಗಡೆ ಉಚಿತವಾಗಿ, ಆಸ್ಪತ್ರೆಯಲ್ಲಿ ಹಣ ಕೊಟ್ಟು ಪಡೆಯುವ ಅತ್ಯಂತ ಅಮೂಲ್ಯ ವಸ್ತು ಯಾವುದು?
