Home » Viral Video: ಮದವೇರಿ ರಸ್ತೆಯಲ್ಲಿದ್ದ ವಾಹನಗಳನ್ನೆಲ್ಲ ಪುಡಿಗಟ್ಟಿದ ದಸರಾ ಆನೆ !!

Viral Video: ಮದವೇರಿ ರಸ್ತೆಯಲ್ಲಿದ್ದ ವಾಹನಗಳನ್ನೆಲ್ಲ ಪುಡಿಗಟ್ಟಿದ ದಸರಾ ಆನೆ !!

0 comments

Viral Video: ದೇಶಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆಮಾಡಿದೆ. ಹಬ್ಬ ಮುಗಿಸಿ ಜನ ನಿರಾಳವಾಗಿದ್ದಾರೆ. ಆದರೆ ಈ ಬೆನ್ನಲ್ಲೇ ದಸರಾ ಮೆರವಣಿಗೆಯ ವೇಳೆ ಆನೆಯೊಂದು ಬೀದಿಯಲ್ಲಿ ಮನಬಂದಂತೆ ಓಡಿ, ಸಿಕ್ಕ ಸಿಕ್ಕ ವಾಹನಗಳನ್ನು ಜಖಂ ಮಾಡಿ ಜನರ ಆತಂಕಕ್ಕೆ ಕಾರಣವಾದ ಘಟನೆ ನಡೆದಿದೆ.

ಹೌದು, ಬಿಹಾರದ(Bihar) ಸರನ್‌ ಜಿಲ್ಲೆಯಲ್ಲಿ ದಸರಾ ಆನೆಯೊಂದು ವಾಹನಗಳನ್ನು ಪುಡಿಗಟ್ಟುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗ್ತಿದೆ. ಅಲ್ಲದೆ ಮಾರುಕಟ್ಟೆ ಪ್ರದೇಶದಲ್ಲಿ ದಿಕ್ಕೆಟ್ಟು ಓಡಿದ ಆನೆ ಹಲವರಿಗೆ ಪ್ರಾಣಭೀತಿಯನ್ನೂ ಉಂಟು ಮಾಡಿತ್ತು.

ಅಂದಹಾಗೆ ಕಾರುಗಳನ್ನು ತುಳಿದು ಧ್ವಂಸಪಡಿಸಿದ ಆನೆಯನ್ನು ಎರಡು ತಾಸುಗಳ ಬಳಿಕ ಹತೋಟಿಗೆ ತರುವಲ್ಲಿ ಮಾವುತರು ಯಶಸ್ವಿಯಾಗಿದ್ದಾರೆ. ಉಂಟಾಗಿಲ್ಲ. ಸುದೈವವಶಾತ್‌ ಘಟನೆಯಲ್ಲಿ ಯಾವುದೇ ಜೀವಹಾನಿ ಆದರೆ ಆನೆ ಕೆರಳಲು ಕಾರಣವೇನೆಂದು ಇದುವರೆಗೂ ತಿಳಿದುಬಂದಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

You may also like

Leave a Comment