Home » Viral Video: ಹುಚ್ಚು ಪ್ರೀತಿಗೆ ಬಿದ್ದ ಹುಡುಗ, ಎದೆ ಕೂದಲಿನಿಂದ ದಿಂಬು ತಯಾರಿಸಿ ಪ್ರಿಯತಮೆಗೆ ಪಾರ್ಸಲ್ !

Viral Video: ಹುಚ್ಚು ಪ್ರೀತಿಗೆ ಬಿದ್ದ ಹುಡುಗ, ಎದೆ ಕೂದಲಿನಿಂದ ದಿಂಬು ತಯಾರಿಸಿ ಪ್ರಿಯತಮೆಗೆ ಪಾರ್ಸಲ್ !

0 comments
Boyfriend made pillow

Boyfriend Made Pillow: ಪ್ರೀತಿಗಾಗಿ, ಪ್ರೀತಿಸುವವರಿಗಾಗಿ ಏನು ಬೇಕಾದರು ತ್ಯಾಗ ಮಾಡಲು ಪ್ರೇಮಿಗಳು ಸದಾ ಸಿದ್ಧ ಇರುತ್ತಾರೆ ಎಂದು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಒಬ್ಬರು ಜೀವ ಕೊಟ್ಟು ಪ್ರೀತಿಸುತ್ತಾರೆ, ಇನ್ನೊಬ್ಬರು ಜೀವ ತೆಗೆದು ಬೇಕಾದರೂ ಪ್ರೀತಿಸುತ್ತಾರೆ. ಪ್ರೀತಿ ಹೆಸರಲ್ಲಿ ಸಾವಿರಾರು ತ್ಯಾಗಗಳು ಇದ್ದೇ ಇದೆ. ಅದೇ ರೀತಿ ಇಲ್ಲೊಂದು ಆಶ್ಚರ್ಯ ಸಂಗತಿ ನೀವು ತಿಳಿಯಲೇ ಬೇಕು.

ಪ್ರೇಮಿಗಳಿಬ್ಬರು ದೂರವಿದ್ದಾಗ ಬೇಸರವಾಗೋದು ಸಹಜ. ಬೇಸರ ಹೋಗಲಾಡಿಸಲು, ಸದಾ ಪ್ರೇಮಿ ತನ್ನ ಜೊತೆಗಿದ್ದಾನೆ ಎನ್ನುವ ಫೀಲ್ ಬರಲಿ ಎನ್ನುವ ಕಾರಣಕ್ಕೆ ಕೆಲವರು ಹಲವು ರೀತಿಯ ನೆನಪಿನ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ, ತನ್ನ ಪ್ರಿಯತಮೆಗೆ ತನ್ನ ಅಗಲಿಕೆ ಭಾಸವಾಗಬಾರದು ಎನ್ನುವ ಕಾರಣಕ್ಕೆ ವಿಚಿತ್ರ ಪ್ಲಾನ್ ಮಾಡಿದ್ದಾನೆ.

ಹೌದು, ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ದೂರದಲ್ಲಿ ವಾಸವಾಗಿರುವ ಗರ್ಲ್ ಫ್ರೆಂಡ್ (Girlfriend) ಗಾಗಿ ಅದ್ಭುತವಾದ ದಿಂಬನ್ನು (Boyfriend Made Pillow) ಸಿದ್ಧಪಡಿಸಿದ್ದಾನೆ. ತನ್ನ ಎದೆಗೂದಲನ್ನು ಕಿತ್ತು, ದಿಂಬು ಸಿದ್ಧಪಡಿಸಿದ್ದಾನೆ.

ವೀಡಿಯೊದಲ್ಲಿ ಈ ವ್ಯಕ್ತಿ ತನ್ನ ಎದೆಯ ಕೂದಲು ಕೀಳೋದನ್ನು ನೀವು ನೋಡ್ಬಹುದು. ನಂತರ ಹೃದಯದ ಆಕಾರದಲ್ಲಿ ದಿಂಬಿನ ಮೇಲೆ ಅದನ್ನು ಅಂಟಿಸುತ್ತಾನೆ. ಹೀಗೆ ಕೂದಲಿನ ದಿಂಬು ಸಿದ್ಧವಾದ ನಂತರ, ಪ್ರೇಮಿ ಅದರ ಮೇಲೆ ತಲೆಯಿಟ್ಟು ಮಲಗಿರುವುದನ್ನು ಕಾಣಬಹುದು.

ಈತ, ಪ್ರಿಯತಮೆಯಿಂದ ದೂರ ಇರುವ ಕಾರಣ, ಆಕೆ ಇವನನ್ನು ಬಹಳಷ್ಟು ಮಿಸ್ ಮಾಡಿಕೊಳ್ತಾಳಂತೆ. ತನ್ನ ಗೆಳತಿ ಒಂಟಿತನ ಮತ್ತು ಖಿನ್ನತೆಗೆ ಒಳಗಾಗಿದ್ದಾಳೆ. ಆಕೆಯ ನೋವನ್ನು ಕಡಿಮೆ ಮಾಡಲು ನಾನು ಹೀಗೆ ಮಾಡಿದ್ದೇನೆ ಎನ್ನುತ್ತಾನೆ ವ್ಯಕ್ತಿ. ಎದೆಗೂದಲಿನಿಂದ ತಯಾರಾದ ದಿಂಬಿನ ಮೇಲೆ ಹುಡುಗಿ ಮಲಗಿದ್ರೆ ಆಕೆಗೆ ನನ್ನ ಜೊತೆ ಇದ್ದ ಅನುಭವವಾಗುತ್ತದೆ. ಆಕೆ ನನ್ನನ್ನು ಮಿಸ್ ಮಾಡಿಕೊಳ್ಳೋದಿಲ್ಲ ಎಂಬುದು ವ್ಯಕ್ತಿ ಅಭಿಪ್ರಾಯ.

ವ್ಯಕ್ತಿ ಈ ದಿಂಬು ತಯಾರಿಸಲು ಅನೇಕ ದಿನಗಳನ್ನು ತೆಗೆದುಕೊಂಡಿದ್ದಾನೆ. ಇದನ್ನು ಗರ್ಲ್ ಫ್ರೆಂಡ್ ಗೆ ನೀಡಿದ್ದಾನೆ. ನಂತರ fitz_reilly ಇನ್ಸ್ಟಾಗ್ರಾಮ್ ನಲ್ಲಿ ನಾನು ಅವಳನ್ನು ತುಂಬಾ ಪ್ರೀತಿಸುತ್ತೇನೆ ಎಂದು ವ್ಯಕ್ತಿ ಶೀರ್ಷಿಕೆ ಹಾಕಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಕೆಲವರಿಗೆ ಇಷ್ಟವಾಗಿಲ್ಲ. ಇನ್ನು ಕೆಲವರು ತ್ರಿಲ್ಲಿಂಗ್ ಆಗಿದೆ ಎಂದಿದ್ದಾರೆ. ಹುಚ್ಚು ಪ್ರೀತಿಗೆ ಜನ ಏನೆಲ್ಲಾ ಮಾಡುತ್ತಾರೆ ಅಂದರೆ ಇದೇ ಸಾಕ್ಷಿ.

ಇದನ್ನೂ ಓದಿ: “ಕರಿಯರ್‌ನಲ್ಲಿ ಪ್ರಮೋಷನ್ ಬೇಕಂದ್ರೆ ಅದು ಬ್ರಾಡ್‌ ಆಗಿ ಇರಬೇಕು ಎಂದ ನಾಯಕಿ ನಟಿ ” ಅಬ್ಬ…ಹೀಗೂ ಉಂಟಾ ?!

You may also like