Home » Python viral video: ಹೆಬ್ಬಾವಿನೊಂದಿಗೆ ಆಟವಾಡಿದ ಮಹಿಳೆ- ಅವಳು ಹೇಗೆಲ್ಲಾ ಆಡಿದ್ಲು ಅಂತ ತಿಳುದ್ರೆ ಶಾಕ್ ಆಗೋದು ಪಕ್ಕಾ !!

Python viral video: ಹೆಬ್ಬಾವಿನೊಂದಿಗೆ ಆಟವಾಡಿದ ಮಹಿಳೆ- ಅವಳು ಹೇಗೆಲ್ಲಾ ಆಡಿದ್ಲು ಅಂತ ತಿಳುದ್ರೆ ಶಾಕ್ ಆಗೋದು ಪಕ್ಕಾ !!

1 comment
Python viral video

Python viral video :ಸೋಷಿಯಲ್ ಮೀಡಿಯಾದಲ್ಲಿ(Social Media)ಅದೆಷ್ಟೋ ವಿಡಿಯೋಗಳು ದಿನಂಪ್ರತಿ(Viral Video)ವೈರಲ್ ಆಗುತ್ತಿರುತ್ತದೆ. ಅವುಗಳಲ್ಲಿ ಕೆಲವು ನಮ್ಮನ್ನು ಅಚ್ಚರಿಗೆ ತಳ್ಳಿದರೆ ಮತ್ತೆ ಕೆಲವು ನಮ್ಮನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತವೆ. ಸದ್ಯ ವೈರಲ್ (Viral News)ಆಗುತ್ತಿರುವ ಸುದ್ದಿಯ ಫೋಟೋ ನೆಟ್ಟಿಗರನ್ನು ಅಚ್ಚರಿ ಮೂಡಿಸಿದೆ.

ಹಾವು ಎಂದರೆ ಹೆದರದೇ ಇರುವವರೇ ವಿರಳ. ಅದರಲ್ಲಿಯೂ ಹೆಬ್ಬಾವು ಎಂದರೆ ಸಾಕು ಮೈಯೆಲ್ಲಾ ಚಳಿ ಹಿಡಿದಂತೆ ಭಯ ಆವರಿಸುತ್ತದೆ. ದೈತ್ಯ ಹೆಬ್ಬಾವು ಒಮ್ಮೆ ದಾಳಿ ಮಾಡಿ ಸುತ್ತಿಕೊಂಡರೆ ಅದರ ಹೆಬ್ಬಾವು ಸುತ್ತಿಕೊಳ್ಳುವ ಪ್ರಾಣಿ ಇಲ್ಲವೇ ಮನುಷ್ಯನ ಎಲುಬುಗಳು ಮುರಿದು ಪುಡಿ ಪುಡಿಯಾದರೂ ಅಚ್ಚರಿಯಿಲ್ಲ. ಅಷ್ಟೇ ಅಲ್ಲದೆ, ಅದರ ಬಾಹುಬಲದಿಂದ ತಪ್ಪಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ, ಅಂತಹ ದೈತ್ಯ ಹೆಬ್ಬಾವನ್ನು ಮಹಿಳೆಯೊಬ್ಬರು ಬರಿ ಕೈಯಲ್ಲಿ ಹಿಡಿದು ಆಟ ಆಡಿದ ವಿಡಿಯೋ(Women hold python viral video) ಸೋಷಿಯ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ನೋಡುಗರ ಮೈ ಜುಂ ಎನಿಸುತ್ತದೆ.

ಜೀವ ಭಯವನ್ನು ಲೆಕ್ಕಿಸದೇ ಹೆಬ್ಬಾವನ್ನು ಸಾಕುಪ್ರಾಣಿಯ ರೀತಿಯಲ್ಲಿ ಆಟವಾಡಿಸುತ್ತಿರುವುದನ್ನ ನೋಡಬಹುದು. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ. @shital_kasar_official_ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವೀಡಿಯೊ ತುಣುಕುಗಳು ಮಹಿಳೆಯ ಸಾಹಸವನ್ನು ಪ್ರದರ್ಶಿಸುತ್ತದೆ. ಈ ವಿಡಿಯೋ 3,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

https://www.instagram.com/reel/Czz5eARo97X/?igshid=MzRlODBiNWFlZA==

ಇದನ್ನೂ ಓದಿ: Supreme Court:ದೆಹಲಿ ಮುಖ್ಯ ಕಾರ್ಯದರ್ಶಿ ಆಯ್ಕೆ ವಿಚಾರ- ಕೇಂದ್ರಕ್ಕೆ ಖಡಕ್ ಸೂಚನೆ ಕೊಟ್ಟ ಸುಪ್ರೀಂ !!

You may also like

Leave a Comment