Home » Viral Video | ರೈಲಿನಲ್ಲಿ ಓಲಾಡುತ್ತ ರೀಲ್ ಹುಚ್ಚಾಟ, ಗಾಳಿಯಲ್ಲಿ ಹಕ್ಕಿಯಂತೆ ಪುರ್ರನೆ ಹಾರೇ ಹೊಯ್ತು ಪ್ರಾಣ !

Viral Video | ರೈಲಿನಲ್ಲಿ ಓಲಾಡುತ್ತ ರೀಲ್ ಹುಚ್ಚಾಟ, ಗಾಳಿಯಲ್ಲಿ ಹಕ್ಕಿಯಂತೆ ಪುರ್ರನೆ ಹಾರೇ ಹೊಯ್ತು ಪ್ರಾಣ !

0 comments

ಅಬ್ಬಬ್ಬ! ಇಲ್ಲೊಬ್ಬ ತನ್ನ ಹುಚ್ಚಾಟದಿಂದ ಏನ್ ಮಾಡ್ಕೊಂಡ ನೋಡಿ. ಅತಿಯಾಗಿ ಸ್ಟಂಟ್ ಮಾಡಲು ಹೋದ ಆತನ ಗತಿ ಏನಾಯ್ತು ನೀವೇ ನೋಡಿ

ಈಗಿನ ಕಾಲದಲ್ಲಿ ಸಿನಿ ಇಂಡಸ್ಟ್ರಿಯಲ್ಲಿ ಮೆರೆದರೆ ಮಾತ್ರ ಹೀರೋ ಅಥವಾ ಹೀರೋಯಿನ್ ಆಗಬೇಕು ಅಂತ ಏನಿಲ್ಲ. ಕೈಯಲ್ಲಿರುವ ಮೊಬೈಲ್ ಕ್ಯಾಮೆರಾದ ಮುಂದೆ ಒಂದಷ್ಟು ಪೋಸ್ ಗಳು ಕೊಟ್ರೆ ಸಾಕು, ತನ್ನನ್ನು ತಾನು ಹೀರೋ ಅಥವಾ ಹೀರೋಯಿನ್ ಅಂತ ಅಂದುಕೊಳ್ಳುತ್ತಾರೆ. ಟಿಕ್ ಟಾಕ್ ಬ್ಯಾನ್ ಆದ್ರೆ ಏನಂತೆ? ರೀಲ್ಸ್ ಇದೆ ಅಲ್ವಾ ಅನ್ನೋ ಒಂದು ನಂಬಿಕೆಯಲ್ಲಿ ಜನರು ಇದ್ದಾರೆ ಅಂತ ಅನ್ಸುತ್ತೆ. ಆದರೆ, ವಿಡಿಯೋಗಳನ್ನು ಎಲ್ಲಿ ಮಾಡಬೇಕು, ಎಲ್ಲಿ ಮಾಡಬಾರದು ಎಂಬ ಅರಿವಿರಬೇಕು. ಇಲ್ಲೊಬ್ಬ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ದೂರಿನಲ್ಲಿ ನೇತು ಹಾಕಿಕೊಂಡು ರೀಲ್ಸ್ ಮಾಡಲು ಹೋಗಿದ್ದಾನೆ, ಪರಿಣಾಮ ನೀವೇ ಕಣ್ಣಾರೆ ನೋಡುವಿರಂತೆ.

ಈ ಯುವಕನನ್ನು ನೋಡುತ್ತಿದ್ದರೆ, ಎಂಥವರಿಗಾದರೂ ಸ್ವಲ್ಪ ಒಳಗೆ ಹೋಗು ಮಾರಾಯ ಅಂತ ಹೇಳಬೇಕು ಅನಿಸುತ್ತೆ. ಆದರೆ, ಆತ ನೋಡಿ : ತನ್ನನ್ನ ತಾನು ಹೀರೋ ಅಂತ ಅನ್ಕೊಂಡು ರೈಲಿನ ಬಾಗಿಲಲ್ಲಿ ನಿಂತು ಭರ ಭರ ಹೊಡೆಯುವ ಗಾಳಿಯಲ್ಲಿ ತನ್ನ ತಲೆಗೂದಲನ್ನು ಚದುರಿಸುತ್ತ ಎಂಜಾಯ್ ಮಾಡ್ತಾ ಇದ್ದಾನೆ. ರೈಲಿಗೆ ನೇತು ಹಾಕುತ್ತಾ, ರೈಲು ಪಟ್ಟಿಯ ಪಕ್ಕದ ಕಂಬಗಳು ಬಂದಾಗ ಒಳಗೆ ಸರಿಯುತ್ತಾ ಸ್ಟಂಟ್ ಮಾಡಿದ್ದಾನೆ.
ಆದರೆ ಇದು ಕೆಲಕಾಲದವರೆಗೆ ಮಾತ್ರ ಚೆನ್ನಾಗಿತ್ತು, ಇನ್ನಷ್ಟು ಹೆಚ್ಚಾದಾಗ, ಅವನಿಗೆ ತಿಳಿಯಬೇಕಿತ್ತು ಸಾಕು ಒಳಗೆ ಹೋಗೋಣ; ಎಲ್ಲಾದರೂ ರೈಲಿನ ಮೂಲೆಯಲ್ಲಿ ಸೆಟಲ್ ಆಗೋಣ ಅಂತ. ಆದರೆ ದುರಾದೃಷ್ಟವಶಾತ್ ಆತ ಹುಚ್ಚಾಟ ಮುಂದುವರೆಸಿದ್ದಾನೆ. ಒಂದು ಸಲ ಆತನ ಗಮನ ಕಾಲ ಬಳಿ ಹೋದಾಗ ಚಲಿಸುವ ರೈಲಿನ ಬಾಗಿಲ ಪಕ್ಕದಲ್ಲಿ ಕಂಬ ಸಿಕ್ಕಿದೆ. ಕಂಬ ಕುಟ್ಟಿದ ರಭಸಕ್ಕೆ ರೈಲಿನಿಂದ ಹಾರಿ ಹೋಗಿದೆ ಪ್ರಾಣ.

ಅವನು ಕೆಳಗೆ ಬಿದ್ದ ನಂತರ ವಿಡಿಯೋ ಮಾಡುತ್ತಿದ್ದವ ನಿಲ್ಲಿಸಿದ್ದಾರೆ. ಆತ ಮೊದಲು ಎಚ್ಚರಿಕೆಯನ್ನು ಕೊಡಬಹುದಿತ್ತು. ಓತಿಕೇತಕ್ಕೆ ಬೇಲಿ ಕೂಟ ಸಾಕ್ಷಿ ಎಂಬಂತೆ ಅವನು ಮಾಡುತ್ತಿದ್ದಂತಹ ಓವರ್ ಹುಚ್ಚಾಟಕ್ಕೆ ವಿಡಿಯೋ ಗ್ರಾಫರ್ ಕೂಡ ಸಾತ್ ನೀಡಿದ್ದಾರೆ. ಸಾತ್ ನೀಡಿದ ತಪ್ಪಿಗೆ ಒಂದು ಜೀವ ಬಲಿ ಆಗಿದೆ.
ಈ ವಿಡಿಯೋವು ಜೀವದ ಜತೆ ಆಟ ಆಡುವ ಪರಿಣಾಮ, ಆಗಬಹುದಾದ ಅನಾಹುತಕ್ಕೆ ಸಿಕ್ಕ ಒಂದು ಪಾಠ. ಯಾರೂ ಇಂತಹ ಹುಚ್ಚಾಟಗಳನ್ನು ಮಾಡಲು ಬಯಸದೇ ಇರಲಿ ಎನ್ನುವುದಕ್ಕೆ ಈ ಪೋಸ್ಟ್.

You may also like

Leave a Comment