Cat Viral Video: ಬೆಕ್ಕು (cat) ವಿಶ್ವದ ಅತ್ಯಂತ ಪ್ರೀತಿಯ ಸಾಕು ಪ್ರಾಣಿಗಳಲ್ಲಿ ಒಂದು. ತಮ್ಮ ಕೆಲವೊಂದು ನಿಗೂಢ ನಡವಳಿಕೆ ನಮಗೆ ಇವುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಕಷ್ಟ ಉಂಟಾಗುತ್ತದೆ. ಹಾಗೆನೇ ತುಂಟ ಸ್ವಭಾವಕ್ಕೆ ಕೂಡಾ ಇವು ಹೆಸರುವಾಸಿ. ಈಗ ಈ ವಿಷಯ ಯಾಕಪ್ಪಾ ಅಂದ್ರೆ ಇಲ್ಲೊಂದು ವೀಡಿಯೋ ವೈರಲ್ ಆಗಿದೆ. ಅದೇನೆಂದರೆ ಈ ವೈರಲ್ ವೀಡಿಯೋದಲ್ಲಿ (Viral Video) ಮೂರು ಬೆಕ್ಕೊಂದು ಒಂದು ಪಾರಿವಾಳವನ್ನು ಹಿಡಿಯಲು ಹೊಂಚು ಹಾಕಿ ಹಿಡಿಯುವ ದೃಶ್ಯ ವೈರಲ್ ಆಗಿದೆ. ಇದು ನಿಜಕ್ಕೂ ನೆಟ್ಟಿಗರ ಗಮನ ಸೆಳೆದಿದೆ.
ಈ ವೀಡಿಯೋದಲ್ಲಿ ಮೂರು ಬೆಕ್ಕುಗಳ ಗುಂಪೊಂದು ಕಾರಿನ ಮೇಲೆ ಕುಳಿತು ಪಾರಿವಾಳವನ್ನು ಹಿಡಿಯಲು ಹೋಗಿ ವಿಫಲವಾಗಿರುವ ದೃಶ್ಯ ಕಾಣುತ್ತದೆ. ಆದರೆ ಇವುಗಳು ಬೇಟೆಯಾಡುವ ರೀತಿ, ಚಾಕಚಕ್ಯತೆ ನಿಜಕ್ಕೂ ಯಾವುದೇ ಬೇಟೆಗಾರನಿಗೆ ಕಮ್ಮಿಯಿಲ್ಲ. ಪಾರಿವಳವೊಂದು ಕಾರಿನ ಮೇಲೆ ಕುಳಿತಿದ್ದು, ಕಾರಿನ ಕೆಳಗೆ ಮೂರು ಬೆಕ್ಕಗಳು ಇದ್ದು, ಪಾರಿವಾಳವನ್ನು ಹಿಡಿಯಲು ಹೊಂಚು ಹಾಕುತ್ತಾ ಇರುತ್ತದೆ. ಒಂದು ಕರೆಕ್ಟ್ ಟೈಮ್‌ಗೆ ಈ ಮೂರು ಬೆಕ್ಕುಗಳು ಕಾಯುತ್ತಾ ಇರುತ್ತದೆ. ಸ್ವಲ್ಪ ಹೊತ್ತಿನ ನಂತರ ಬೆಕ್ಕೊಂದು ಕಾರಿನ ಮೇಲೆ ಹತ್ತಿ ದಾಳಿ ಮಾಡಲು ಯತ್ನಿಸುವಾಗ, ಪಾರಿವಾಳ ಪುರ್ರನೆಂದು ಹಾರಿ ಹೋಗುತ್ತದೆ.
ಕೈಗೆ ಬಂದದ್ದು ಬಾಯಿಗೆ ಬಂದಿಲ್ಲ ಎನ್ನುವಂತಹ ಸ್ಥಿತಿ ಬೆಕ್ಕುಗಳಿಗೆ ಬಂತು ಎನ್ನಬಹುದು ಈ ವೀಡಿಯೋ ಮೂಲಕ.
https://www.instagram.com/p/CyKJhoZoYB1/?utm_source=ig_embed&utm_campaign=embed_video_watch_again
