Home » Viral Video: ಮನೆಯವರು ಬಂದರೆಂದು ಪ್ರಿಯಕರನನ್ನು ಪೆಟ್ಟಿಗೆಯಲ್ಲಿ ಅಡಗಿಟ್ಟ ಯುವತಿ – ಮುಂದಾಗಿದ್ದೇ ಆಶ್ಚರ್ಯ !!

Viral Video: ಮನೆಯವರು ಬಂದರೆಂದು ಪ್ರಿಯಕರನನ್ನು ಪೆಟ್ಟಿಗೆಯಲ್ಲಿ ಅಡಗಿಟ್ಟ ಯುವತಿ – ಮುಂದಾಗಿದ್ದೇ ಆಶ್ಚರ್ಯ !!

0 comments

Viral Video: ಪ್ರೀತಿ ಕುರುಡು, ಅದಕ್ಕಾಗಿ ಪ್ರೇಮಿಗಳು ಏನುಬೇಕಾದರೂ ಮಾಡಿಯಾರು. ಯಾವುದೇ ಸಾಹಸ, ತ್ಯಾಗಕ್ಕೂ ಸಿದ್ದ. ಅಂತೆಯೇ ಇದೀಗ ಈ ಸಂಬಂಧ ವಿಚಿತ್ರವಾದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹುಡುಗಿಯೊಬ್ಬಳು ತನ್ನನ್ನು ಭೇಟಿಯಾಗಲು ಬಂದ ಪ್ರೇಮಿಯನ್ನು ಮನೆಯವರ ಕಣ್ಣಿಗೆ ಬೀಳದಂತೆ ಕಾಪಾಡಲು ಸಿನಿಮೀಯ ಶೈಲಿಯಂತೆ ಪೆಟ್ಟಿಗೆಯಲ್ಲಿ ಅಡಗಿಸಿಟ್ಟಿದ್ದಾಳೆ. ಈ ಕುರಿತ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ (Viral Video) ಆಗಿದೆ.

ಅಂದಹಾಗೆ ಮನೆಯಲ್ಲಿ ಯಾರೂ ಇಲ್ಲದಾಗ ಪ್ರಿಯಕರನೊಬ್ಬ ತನ್ನ ಹುಡಗಿಯನ್ನು ಭೇಟಿಯಾಗಲು ಆಕೆಯ ಮನೆಗೆ ಬಂದಿದ್ದಾನೆ. ಈ ವೇಳೆ ದಿಢೀರ್ ಎಂದು ಮನೆಯವರು ಮನೆಗೆ ಬಂದಾದ್ದಾರೆ. ಆಗ ಪ್ರಿಯಕರನನ್ನು ಹುಡುಗಿಯು ಯಾರಿಗೂ ಗೊತ್ತಾಗಬಾರದು ಎಂದು ಮನೆಯ ಪೆಟ್ಟಿಗೆಯೊಳಗೆ ಬಚ್ಚಿಟ್ಟು ಹೊರಗಿನಿಂದ ಲಾಕ್‌ ಮಾಡಿದ್ದಾಳೆ. ಆದರೆ ಕೆಲವು ಕ್ಷಣಗಳಲ್ಲಿ ಎಲ್ಲಾ ಬಯಲಾಗಿದೆ.

ವಿಡಿಯೋದಲ್ಲಿ ಏನಿದೆ?
ಮನೆಯವರಿಗೆ ಹುಡುಗಿಯ ಮೇಲೆ ಯಾಕೋ ಅನುಮಾನ ಬಂದು ಅವಳ ಕೋಣೆಯನ್ನು ನೋಡಿದಾಗ ಅಲ್ಲಿ ಬಟ್ಟೆಗಳೆಲ್ಲಾ ಅಸ್ತವ್ಯಸ್ತವಾಗಿ ಬಿದ್ದಿತ್ತು. ಇದರಿಂದ ಅವರ ಅನುಮಾನ ಹೆಚ್ಚಾಗಿ ಅಲ್ಲಿಯೇ ಇದ್ದ ಪೆಟ್ಟಿಗೆಯನ್ನು ತೆರೆಯಲು ಅವಳ ಬಳಿ ಹೇಳಿದ್ದಾರೆ. ಅದಕ್ಕವಳು ನಿರಾಕರಿಸಿದಾಗ ಅನುಮಾನ ಮತ್ತಷ್ಟೂ ಗಟ್ಟಿಯಾಗಿ ಪೆಟ್ಟಿಗೆಯನ್ನು ತೆರೆಯಲು ಒತ್ತಾಯಿಸಿದ್ದಾರೆ. ಹುಡುಗಿ ಪೆಟ್ಟಿಗೆ ತೆರೆದಾಗ ಪ್ರಿಯಕರ ಅದರಿಂದ ಹೊರ ಬಂದಿದ್ದಾನೆ. ಇದನ್ನು ನೋಡಿದ ಕುಟುಂಬದ ಸದಸ್ಯರು ಶಾಕ್‌ ಆಗಿದ್ದಾರೆ. ಅಷ್ಟು ಸಣ್ಣ ಪೆಟ್ಟಿಗೆಯಲ್ಲಿ ಆತ ಅದು ಹೇಗೆ ಅಡಗಿ ಕುಳಿತ ಎನ್ನುವುದೇ ಎಲ್ಲರಿಗೂ ಆಶ್ಚರ್ಯಕರವಾಗಿದೆ.

ಅಲ್ಲದೆ ಈ ವಿಡಿಯೋ ಲಕ್ಷಾಂತರ ಲೈಕ್ಸ್ ಮತ್ತು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಇದು ನೆಟ್ಟಿಗರಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಪ್ರೇಮಿಗಳು ಪ್ರೀತಿಗಾಗಿ ಏನು ಬೇಕಾದರೂ ಮಾಡಬಹುದು ಎಂಬುದನ್ನು ಈ ವಿಡಿಯೊ ತೋರಿಸುತ್ತದೆ.

 

You may also like

Leave a Comment