Home » Mangaluru : ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಕೊಲೆ ಬೆದರಿಕೆ !!

Mangaluru : ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಕೊಲೆ ಬೆದರಿಕೆ !!

0 comments

Mangaluru : ಸುಭಾಷ್ ಶೆಟ್ಟಿ ಹತತ್ಯೆಯ ಬಳಿಕ ಕರಾವಳಿಯಲ್ಲಿ ಕೆಲವು ಹಿಂದೂ ಮುಖಂಡರಿಗೆ ಕೊಲೆ ಬೆದರಿಕೆಗಳು ಬರುತ್ತವೆ. ಕೆಲವು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಮುಂದಿನ ಟಾರ್ಗೆಟ್ ಯಾರು, ಸ್ಪಾಟ್ ಯಾವುದು ಎಂದು ಪೋಸ್ಟ್ ಮಾಡಿ ತಮ್ಮ ಉದ್ಧಟತನ ಮೆರೆಯುತ್ತಿದ್ದಾರೆ. ಇದರ ಬೆನ್ನಲ್ಲೇ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಜೀವ ಬೆದರಿಕೆ ಬಂದಿದೆ.

ಹೌದು, ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಸಾಮಾಜಿಕ ಜಾಲತಾಣದಲ್ಲಿ ಜೀವ‌ ಬೆದರಿಕೆ ಹಾಕಿರುವ‌ ಪ್ರಕರಣಕ್ಕೆ‌ ಸಂಬಂಧಿಸಿದಂತೆ ಕದ್ರಿ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

ಸುದ್ದಿವಾಹಿನಿಯೊಂದರ ಫೇಸ್ ಬುಕ್ ಖಾತೆಯಲ್ಲಿದ್ದ ಸುದ್ದಿಯೊಂದಕ್ಕೆ ‘ಸಾಜೋ‌ ಕಾಂಟ್’ ಎನ್ನುವ ನಕಲಿ ಖಾತೆಯೊಂದರ ಮೂಲಕ ‘ನೆಕ್ಸ್ಟ್ ಟಾರ್ಗೆಟ್ ಶರಣ್ ಪಂಪ್ ವೆಲ್ ಬಿ‌ ರೆಡಿ ಟು‌ಡೈ’ ಎಂದು ಕಮೆಂಟ್ ಹಾಕಲಾಗಿದೆ.

You may also like