Home » ವಿಟ್ಲ : ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು

ವಿಟ್ಲ : ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವು

0 comments

ವಿಟ್ಲ : ಪಾದಚಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿಯನ್ನು ಕೂಲಿ ಕೆಲಸ ಮಾಡಿಕೊಂಡು
ಜೀವನ ನಡೆಸುತ್ತಿದ್ದ ಕಡಂಬು ನಿವಾಸಿ ನಾರಾಯಣ ಕೊಡಂಗೆ ಎಂದು ಗುರುತಿಸಲಾಗಿದೆ.

ವಿಟ್ಲ-ಕಾಸರಗೋಡು ಹತ್ತಿರದ ಪೆಟ್ರೋಲ್ ಪಂಪ್ ಹತ್ತಿರ ಇವರು ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಕಲ್ಲು ಸಾಗಾಟ ಮಾಡುವ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತವ್ಯಕ್ತಿಯ ಗುರುತು ಪತ್ತೆಯಾಗದಿದ್ದ ಕಾರಣ ವಿಟ್ಲಪೊಲೀಸರು ಸಾರ್ವಜನಿಕರಲ್ಲಿ ವ್ಯಕ್ತಿಯ ಗುರುತಿಗಾಗಿ ಮನವಿ ಮಾಡಿದ್ದರು. ಸದ್ಯ ವ್ಯಕ್ತಿಯ ಗುರುತು ಪತ್ತೆಯಾಗಿದ್ದು, ಮೃತ ವ್ಯಕ್ತಿಯ ಮನೆಯವರು ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.

You may also like

Leave a Comment