Home » Vitla: ಬೀಚ್ ಗೆಂದು ತೆರಳಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು! ಅಲೆಗಳ ರಭಸಕ್ಕೆ ಓರ್ವ ಬಾಲಕಿ ಸಾವು!

Vitla: ಬೀಚ್ ಗೆಂದು ತೆರಳಿದ ವಿದ್ಯಾರ್ಥಿ-ವಿದ್ಯಾರ್ಥಿನಿಯರು! ಅಲೆಗಳ ರಭಸಕ್ಕೆ ಓರ್ವ ಬಾಲಕಿ ಸಾವು!

1 comment
Vitla

Vitla: ದಸರಾ ರಜಾ ಇದ್ದ ಕಾರಣ ಬೀಚ್ ಗೆಂದು ತೆರಳಿದ ಸಂದರ್ಭ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆಯೊಂದು ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ.

ವಿಟ್ಲ ಮೂಲದ ದಿಗಂತ (15) ದಿವ್ಯರಾಜ್ (15) ತೇಜಸ್ (14) ಕೀರ್ತನ್ (16) ಅಶ್ಮಿತಾ (15) ನಿಶಾ (15) ಇವರೆಲ್ಲರೂ ರಜಾ ಕಾರಣ ಬೀಚ್ ಗೆ ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದೆ.

ನೀರಿನ ಅಲೆಯ ರಭಸಕ್ಕೆ ನೀರಿನಲ್ಲಿ ಮುಳುಗುತ್ತಿದ್ದ ಇವರನ್ನು ಸ್ಥಳೀಯರು, ಹಾಗೂ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಇವರಲ್ಲಿ ನಾಲ್ಕು ಜನ ಆರೋಗ್ಯವಾಗಿದ್ದು, ತೇಜಸ್ ಎಂಬ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.

ಈ ಘಟನೆಯಲ್ಲಿ ನಿಶಾ ಎಂಬ ಬಾಲಕಿಯು ಮೃತಪಟ್ಟಿರುತ್ತಾರೆ.

 

ಇದನ್ನು ಓದಿ: Coriander Effect: ಕೊತ್ತಂಬರಿ ಸೊಪ್ಪು ತಿಂದ್ರೂ ಬರುತ್ತೆ ಈ ಎಲ್ಲಾ ಕಾಯಿಲೆಗಳು !! ತಿನ್ನೋ ಮುನ್ನ ಈ ಸ್ಟೋರಿಯನ್ನೊಮ್ಮೆ ತಪ್ಪದೇ ಓದಿ

You may also like

Leave a Comment