Home » Vitla: ಬೀಗ ಹಾಕಿದ ಮನೆಯಲ್ಲಿ ಕಳ್ಳರ ಕೈ ಚಳಕ; ಎ.ಸಿ.ಚಾಲು ಮಾಡಿ ರಾಡೋ ವಾಚ್‌, ಡಿವಿಆರ್‌ ಕಳ್ಳತನ

Vitla: ಬೀಗ ಹಾಕಿದ ಮನೆಯಲ್ಲಿ ಕಳ್ಳರ ಕೈ ಚಳಕ; ಎ.ಸಿ.ಚಾಲು ಮಾಡಿ ರಾಡೋ ವಾಚ್‌, ಡಿವಿಆರ್‌ ಕಳ್ಳತನ

0 comments
Vitla

Vitla: ಬೀಗ ಹಾಕಿ ವಿದೇಶದಲ್ಲಿರುವವರ ಮೆನಗೆ ಕಳ್ಳರು ನುಗ್ಗಿ ರಾಡೋ ವಾಚ್‌ ಕದ್ದು, ಸಿಸಿಟಿವಿ, ಡಿವಿಆರ್‌ ಕಳ್ಳತನ ಮಾಡಿದ ಘಟನೆಯೊಂದು ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗ ಇರುವ ಮನೆಯೊಂದರಲ್ಲಿ ನಡೆದಿದೆ.

ಇದನ್ನೂ ಓದಿ: How To Lizard Keep Away: ನಿಮಗೂ ಹಲ್ಲಿಗಳ ಭಯವಿದ್ದರೆ ಈ ಟ್ರಿಕ್ಸ್ ಟ್ರೈ ಮಾಡಿ; ಮತ್ತೆ ವಾಪಸ್‌ ಹಲ್ಲಿ ಬರುವುದಿಲ್ಲ

ಎಂ.ಕೆ.ಖಲೀಲ್‌ ಇವರು ಮನೆ ಮಾಲೀಕರಾಗಿದ್ದು, ಅರಬ್‌ ರಾಷ್ಟ್ರದಲ್ಲಿ ಇದ್ದಾರೆ. ಆರು ತಿಂಗಳ ಹಿಂದೆ ಬಂದು ಅಲ್ಲಿಗೆ ಹೋಗಿದ್ದರು. ರವಿವಾರ ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮನೆಯ ಬಾಗಿಲು ತೆರೆದಿರುವುದುನ್ನು ಕಂಡು ಸಂಶಯಗೊಂಡಾಗ, ಮನೆಯಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

Image Credit: Udyavani

image credit: Udyavani

ಇದನ್ನೂ ಓದಿ: Black Bear Meat: ಕರಡಿ ಮಾಂಸ ತಿಂದ ಕುಟುಂಬದ ಸದಸ್ಯರ ಮೆದುಳಿನಲ್ಲಿ ಹುಳ

ಸಿಸಿ ಕ್ಯಾಮರಾದ ದೃಷ್ಟಿಯನ್ನು ಬೇರೆ ಕಡೆ ಬದಲಾಯಿಸಿ, ಮುಂಭಾಗದ ಬಾಗಿಲು ಮುರಿದು ಕಳ್ಳರು ಎ.ಸಿ.ಚಾಲು ಮಾಡಿ ನಾಲ್ಕು ಕಪಾಟು ಒಡೆದು ಹಾಕಿ, ಕಳ್ಳತನಕ್ಕೆ ಸಾಕಷ್ಟು ಜಾಲಾಡಿದ್ದಾರೆ. ಕಪಾಟಿನಲ್ಲಿದ್ದ ಒಂದು ಲಕ್ಷ ಮೌಲ್ಯದ ರಾಡೋ ವಾಚ್‌ ನಾಪತ್ತೆಯಾಗಿದೆ. ಡಿವಿಆರ್‌ ಕೊಂಡೊಯ್ದಿದ್ದಾರೆ. ವಿಟ್ಲ ಪೊಲೀಸರು ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ: Tulsi Plant: ಈ ಮೂರು ಗಿಡಗಳನ್ನು ತುಳಸಿ ಗಿಡದ ಪಕ್ಕದಲ್ಲಿ ನೆಟ್ಟರೆ ಸಾಕು! ಅದೃಷ್ಟ ನಿಮ್ಮ ಕೈ ಸೇರುತ್ತೆ!

You may also like

Leave a Comment