Home » Vladimir Putin: ಕಾರಿಂದ ಇಳಿಯುತ್ತಿದ್ದಂತೆ ರಾಷ್ಟ್ರಪತಿ, ಪ್ರಧಾನಿಯನ್ನು ಬಿಟ್ಟು ಪುಟಿನ್ ಶೇಕ್ ಹ್ಯಾಂಡ್ ಮಾಡಿದ್ದು ಇವರಿಗೆ !! ವಿಡಿಯೋ ವೈರಲ್

Vladimir Putin: ಕಾರಿಂದ ಇಳಿಯುತ್ತಿದ್ದಂತೆ ರಾಷ್ಟ್ರಪತಿ, ಪ್ರಧಾನಿಯನ್ನು ಬಿಟ್ಟು ಪುಟಿನ್ ಶೇಕ್ ಹ್ಯಾಂಡ್ ಮಾಡಿದ್ದು ಇವರಿಗೆ !! ವಿಡಿಯೋ ವೈರಲ್

0 comments

Vladimir Putin: ರಷ್ಯಾದ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಇದೀಗ ಭಾರತ (India) ಪ್ರವಾಸ ಮುಗಿಸಿ ಮರಳಿ ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಅವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಲವು ಒಪ್ಪಂದಗಳು ನಡೆದಿವೆ. ಇನ್ನೂ ಪುಟಿನ್ ಅವರು ಶುಕ್ರವಾರ ರಾಷ್ಟ್ರಪತಿ ಭವನಕ್ಕೆ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಲು ಆಗಮಿಸಿದರು. ಸಂದರ್ಭದಲ್ಲಿ ಅವರು ಕಾರಿನಿಂದ ಇಳಿದಾಗ ರಾಷ್ಟ್ರಪತಿ ಮತ್ತು ಪ್ರಧಾನಿ ಮೋದಿ ಅವರನ್ನು ಬಿಟ್ಟು ಮೊದಲು ಇವರಿಗೆ ಶೇಕ್ ಹ್ಯಾಂಡ್ ಮಾಡಿದ್ದಾರೆ.

ಹೌದು ಪುಟಿನ್ ಅವರನ್ನು ಸ್ವಾಗತಿಸಲು ರಾಷ್ಟ್ರಭವನದ ಎದುರು ಅವರನ್ನು ಸ್ವಾಗತಿಸಲು ಸ್ವತಃ ರಾಷ್ಟ್ರಪತಿಗಳು ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದರು. ಆದರೂ, ತಮ್ಮ ಕಾರಿನಿಂದ ಇಳಿದ ನಂತರ, ಪುಟಿನ್ ಅವರು ರಾಷ್ಟ್ರಪತಿಗಾಗಲಿ ಅಥವಾ ಪ್ರಧಾನಿಯೊಂದಿಗೆ ಕೈಕುಲುಕಲಿಲ್ಲ. ಬದಲಿಗೆ ಕಾರ್‌ನಿಂದ ಇಳಿದ ಬಳಿಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್, ಮೇಜರ್‌ ಜನರಲ್‌ ವೂದೇವ್‌ ಪರಿದಾ ಅವರಿಗೆ ಕೈಕುಲುಕಿದರು.

ಯಸ್, ಪುಟಿನ್ ಕಾರಿನಿಂದ ಇಳಿದ ತಕ್ಷಣ ತಲೆಯಾಡಿಸಿ ಎಲ್ಲರಿಗೂ ನಮಸ್ಕರಿಸಿದರು. ನಂತರ ಅವರು ರಾಷ್ಟ್ರಪತಿ ಕಡೆಗೆ ತಿರುಗಿದರು. ಆ ಹಂತದಲ್ಲಿ ಅವರು ಇದ್ದಕ್ಕಿದ್ದಂತೆ ಒಂದು ಕ್ಷಣ ನಿಂತು, ಸ್ವಲ್ಪ ಬಲಕ್ಕೆ ತಿರುಗಿ ಮೇಜರ್‌ ಜನರಲ್‌ ವೂದೇವ್‌ ಪರಿದಾ ಅವರಿಗೆ ಕೈಕುಲುಕಿದರು. ನಂತರ ಅವರು ಮುಂದೆ ಸಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ನಂತರ ಪ್ರಧಾನಿ ಮೋದಿ ಅವರೊಂದಿಗೆ ಕೈಕುಲುಕಿದರು. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

You may also like