Home » Waqf bill: ಲೋಕಸಭೆಯಲ್ಲಿ ಬಹುಮತದಿಂದ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ!!

Waqf bill: ಲೋಕಸಭೆಯಲ್ಲಿ ಬಹುಮತದಿಂದ ಅಂಗೀಕಾರಗೊಂಡ ವಕ್ಫ್ ತಿದ್ದುಪಡಿ ಮಸೂದೆ!!

0 comments

Waqf bill: ಭಾರಿ ವಿರೋಧದ ನಡುವೆಯೂ ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯೋ ಮಂಡನೆಯಾಗಿದೆ. ಕಾನೂನು ಸಚಿವ ಕಿರಣ್ ರಿಜಿಜು ಅವರು ಮಸೂದೆ ಮಂಡನೆ ಮಾಡಿದ್ದಾರೆ. ಮಂಡನೆ ಯಾಗುವುದು ಮಾತ್ರವಲ್ಲದೆ ಲೋಕಸಭೆಯಲ್ಲಿ ಬಹುಮತಗಳಿಂದ ಈ ಮಸೂದೆ ಅಂಗೀಕಾರಗೊಂಡಿದೆ.

ಹೌದು, ವಿರೋಧಪಕ್ಷಗಳ ಭಾರೀ ವಿರೋಧದ ನಡುವೆಯೂ ಕೇಂದ್ರ ಸಚಿವ ಕಿರಣ್‌ ರಿಜಿಜು (Kiren Rijiju) ಮಸೂದೆಯನ್ನು ಮಂಡಿಸಿದರು. ಅದಾದ ಬಳಿಕ ಮಸೂದೆ ಮೇಲೆ ಸುದೀರ್ಘ ಚರ್ಚೆ ನಡೆಯಿತು. ಬಳಿಕ ವಕ್ಫ್‌ ಬಿಲ್‌ ಅನ್ನು ಸ್ಪೀಕರ್‌ ಓಂ ಬಿರ್ಲಾ ಮತಕ್ಕೆ ಹಾಕಿದರು. ಕೊನೆಗೆ ಬಹುಮತದಿಂದ ಅಂಗೀಕಾರಗೊಂಡಿತು.

ಇನ್ನು ಮಸೂದೆ ಮಂಡಿಸಿದ ಕಿರಣ್‌ ರಿಜಿಜು ಅವರು, ʼʼಇದರಿಂದ ದೇಶದಲ್ಲಿರುವ ಯಾವುದೇ ಮಸೀದಿಗೆ ತೊಂದರೆಯುಂಟಾಗುವುದಿಲ್ಲ. ಮಸೂದೆ ಮಂಡನೆಗೆ ಆಗತ್ಯವಾದ ಎಲ್ಲ ಕಾನೂನು ಕ್ರಮವನ್ನು ನಾವು ಅನುಸರಿಸಿದ್ದೇವೆ. ವಕ್ಫ್‌ ಮಸೂದೆಯನ್ನು ಸಂಸತ್‌ ಅನುಮೋದಿಸಿದೆʼʼ ಎಂದರು.

You may also like