Home » Waqf Amendment Bill: ವಕ್ಫ್‌ ವ್ಯಾಪ್ತಿಯಿಂದ ಬುಡಕಟ್ಟು ಜನಾಂಗದ ಭೂಮಿ ಹೊರಕ್ಕೆ!

Waqf Amendment Bill: ವಕ್ಫ್‌ ವ್ಯಾಪ್ತಿಯಿಂದ ಬುಡಕಟ್ಟು ಜನಾಂಗದ ಭೂಮಿ ಹೊರಕ್ಕೆ!

0 comments

Waqf Amendment Bill: ಕೇಂದ್ರ ಸರಕಾರವು ವಕ್ಫ್‌ ತಿದ್ದುಪಡಿ ಮಸೂದೆಯಲ್ಲಿ ಬುಡಕಟ್ಟು ಜನಾಂಗದ ಭೂಮಿಯನ್ನು ವಕ್ಫ್‌ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಬುಧವಾರ ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮವು ಕೇಂದ್ರ ಸರಕಾರದ ಈ ನಿರ್ಧಾರವನ್ನು ಸ್ವಾಗತ ಮಾಡಿದೆ.

ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮವು ಹೇಳಿಕೆ ಬಿಡುಗಡೆ ಮಾಡಿದೆ. ಸಂವಿಧಾನದ ಐದು ಮತ್ತು ಆರನೇ ಶೆಡ್ಯೂಲ್‌ಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ, ಸಂವಿಧಾನ ಮತ್ತು ಕಾನೂನನ್ನು ಉಲ್ಲಂಘಿಸಿ ಹೆಚ್ಚಿನ ಪ್ರಮಾಣದ ವಕ್ಫ್ ಭೂಮಿ ಮತ್ತು ಆಸ್ತಿಗಳನ್ನು ನೋಂದಾಯಿಸಲಾಗಿದೆ ಎಂದು ಟಿವಿ9 ವರದಿ ಮಾಡಿದೆ.

You may also like