Home » Holiday : ಯುದ್ಧದ ಕಾರ್ಮೋಡ- ಇಲ್ಲಿವರೆಗೂ ಶಾಲಾ-ಕಾಲೇಜುಗಳಿಗೆ ರಜೆ !!

Holiday : ಯುದ್ಧದ ಕಾರ್ಮೋಡ- ಇಲ್ಲಿವರೆಗೂ ಶಾಲಾ-ಕಾಲೇಜುಗಳಿಗೆ ರಜೆ !!

0 comments

Holiday : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಕಾರ್ಮೋಡಗಳು ಕವಿದೆ. ಹೀಗಾಗಿ ಮಕ್ಕಳು, ವಿದ್ಯಾರ್ಥಿಗಳ ಹಿತದೃಷ್ಟಿ ಮತ್ತು ಭದ್ರತೆ ಕಾರಣಕ್ಕಾಗಿ ಶಾಲೆ-ಕಾಲೇಜುಗಳಿಗೆ ಇಂದಿನಿಂದ ಅನಿರ್ದಿಷ್ಟಾವಧಿಗೆ ರಜೆ ಘೋಷಿಸಲಾಗಿದೆ.

ಹೌದು, ಪಾಕಿಸ್ತಾನ ಯಾವಾಗ ಬೇಕಾದರೂ ಭಾರತದ ಮೇಲೆ ಅಟ್ಯಾಕ್ ಮಾಡಲು ಬರುವ ಸಾಧ್ಯತೆ ಇದೆ. ಪಾಕಿಸ್ಥಾನ ಸೇನೆ ಅಥವಾ ಉಗ್ರರ ಪ್ರತಿ ದಾಳಿಗೆ ಕಾಯುತ್ತಿರುವ ಭಾರತ ಎರಡನೇ ಬಾರಿಗೆ ಬಲವಾಗಿ ದಾಳಿ ಮಾಡಲು ಸಜ್ಜಾಗಿದೆ. ಹೀಗಾಗಿ ರಾಜಸ್ತಾನ ರಾಜ್ಯದ ಜೋಧಪುರ ನಗರ ಆಡಳಿತವು ಇಂದಿನಿಂದ ಮುಂದಿನ ಆದೇಶದವರೆಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಿದೆ.

ಜಿಲ್ಲಾಧಿಕಾರಿಗಳಾದ ಗೌರವ್ ಅಗರ್ವಾಲ್ ಅವರು ಅಂಗನವಾಡಿ ಒಳಗೊಂಡಂತೆ ಶಾಲಾ, ಕಾಲೇಜುಗಳಿಗೆ ಸಾರ್ವತ್ರಿಕೆ ರಜೆ ಘೋಷಿಸಿ ಗುರುವಾರ ಆದೇಶ ಹೊರಡಿಸಿದ್ದಾರೆ. ಜೋಧಪುರ ಮಾತ್ರವಲ್ಲದೇ ನೆನ್ನೆಯೇ ರಾಜಸ್ತಾನದ ರಾಜ್ಯದ ಜೈಸಲ್ಮೇರ್ ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದೆ.

You may also like