Home » Flight crash : ಅಹಮದಾಬಾದ್ ವಿಮಾನ ಪತನದಲ್ಲಿ ಟರ್ಕಿ ದೇಶದ ಕೈವಾಡ?

Flight crash : ಅಹಮದಾಬಾದ್ ವಿಮಾನ ಪತನದಲ್ಲಿ ಟರ್ಕಿ ದೇಶದ ಕೈವಾಡ?

0 comments

Flight crash : ಅಹಮದಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ 242 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದ್ದು, ಘಟನೆಯಲ್ಲಿ 242 ಪ್ರಯಾಣಿಕರಲ್ಲಿ 241 ಮಂದಿ ಸಾವನ್ನಪ್ಪಿದ್ದು, ಅದೃಷ್ಟವಶಾತ್ ಒರ್ವ ಪ್ರಯಾಣಿಕೆ ಬದುಕುಳಿದಿದ್ದಾನೆ. ಇದನ್ನಲ್ಲೇ ಈ ವಿಮಾನ ಪತನದ ಕುರಿತು ಸಾಕಷ್ಟು ಗುಮಾನಿಗಳು ಮೂಡಿದ್ದು, ಇದೀಗ ಟರ್ಕಿ ದೇಶದ ಕೈವಾಡ ಇದೆ ಎಂದು ಕೂಡ ಶಂಕಿಸಲಾಗುತ್ತಿದೆ.

ಇದನ್ನೂ ಓದಿ:Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?

 

ಹೌದು, ಅಹಮದಾಬಾದ್ ವಿಮಾನ ದುರಂತವು ಹಲವು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ. ಒಪ್ಪಂದದ ಪ್ರಕಾರ2025 ರಿಂದ ಏರ್‌ ಇಂಡಿಯಾದ ದೊಡ್ಡ ವಿಮಾನಗಳ ನಿರ್ವಹಣೆಯನ್ನು ಟರ್ಕಿ ಕಂಪನಿ ವಹಿಸಿಕೊಂಡಿತ್ತು. ಹೀಗಾಗಿ ಟರ್ಕಿ ಕೈವಾಡ ಇದರಲ್ಲಿ ಇದೆ ಎನ್ನಲಾಗುತ್ತಿದೆ.

ಇದಕ್ಕೆ ಕಾರಣ ಟರ್ಕಿ ಪಾಕಿಸ್ತಾನದ ಪರವಹಿಸಿರುವುದು. ಯಸ್, ಇತ್ತೀಚೆಗೆ ಪಹಲ್ಗಾಂ ಉಗ್ರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ವೇಳೆ ಟರ್ಕಿ ಭಾರತಕ್ಕೆ ದ್ರೋಹ ಬಗೆದು ಪಾಕಿಸ್ತಾನದ ಬೆಂಬಲಕ್ಕೆ ನಿಂತಿತ್ತು. ಅಲ್ಲದೆ, ಶಸ್ತ್ರಾಸ್ತ್ರಗಳ ನೆರವು ಕೂಡ ನೀಡಿತ್ತು. ಹೀಗಾಗಿ, ವಿಮಾನ ಪತನದಲ್ಲಿ ಟರ್ಕಿ ಕೈವಾಡವಿರಬಹುದೇ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ.

ಜೊತೆಗೆ, 2023ರ ನವೆಂಬರ್‌ನಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು, ಏರ್‌ಇಂಡಿಯಾ ವಿಶ್ವದಾದ್ಯಂತ ತನ್ನ ವಿಮಾನಗಳನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬಾಂಬ್ ಇಟ್ಟು ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಸಂಗತಿಯೂ ಈಗ ಮುನ್ನೆಲೆಗೆ ಬಂದಿದ್ದು, ಆತನ ಕೈವಾಡದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

You may also like