Home » Water bottle: ವಾಟರ್ ಬಾಟಲ್ ನೀರು ಕೂಡ ಅಸುರಕ್ಷಿತ!

Water bottle: ವಾಟರ್ ಬಾಟಲ್ ನೀರು ಕೂಡ ಅಸುರಕ್ಷಿತ!

0 comments

Water bottle: ಕಳಪೆ ಹಾಗೂ ಕಲಬೆರಕೆಯುಕ್ತ ಆಹಾರ ಮಾರಾಟದ ವಿರುದ್ಧ ಕರ್ನಾಟಕ ರಾಜ್ಯ ಆಹಾರ ಇಲಾಖೆಯ ಕಾರ್ಯಾಚರಣೆ ಮುಂದುವರಿದಿದೆ. ಇದೀಗ, ಹಲವು ಕಂಪನಿಗಳು ಮಾರಾಟ ಮಾಡುತ್ತಿರುವ ವಾಟರ್ ಬಾಟಲ್​ನಲ್ಲಿರುವ (Water bottle) ನೀರು ಕೂಡ ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬುದು ಆಹಾರ ಇಲಾಖೆ ಪ್ರಯೋಗಾಲಯ ಪರೀಕ್ಷೆಯಿಂದ ತಿಳಿದು ಬಂದಿದೆ.

ಬಾಟಲ್ ಮೂಲಕ ಪೂರೈಕೆ ಆಗುವ ಕುಡಿಯುವ ನೀರು ಶೇಕಡ 50ರಷ್ಟು ಕಳಪೆ ಎಂದು ಆಹಾರ ಇಲಾಖೆಯ ವರದಿ ತಿಳಿಸಿದೆ. ಬಾಟಲ್ ನೀರಿನಲ್ಲಿ ಮಿನರಲ್ ಕೂಡ ಇರುವುದಿಲ್ಲ. ಸಾಕಷ್ಟು ಕಂಪನಿಗಳ ವಾಟರ್ ಬಾಟಲ್ ಅಸುರಕ್ಷಿತ ಎಂದು ವರದಿ ತಿಳಿಸಿದೆ.

You may also like