Home » Weather updates: ಕೇರಳಕ್ಕೆ ಇಂದಿನಿಂದ ಮುಂಗಾರು ಪ್ರವೇಶ: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ನಿರಂತರ ಮಳೆ !

Weather updates: ಕೇರಳಕ್ಕೆ ಇಂದಿನಿಂದ ಮುಂಗಾರು ಪ್ರವೇಶ: ಮುಂದಿನ 48 ಗಂಟೆಗಳಲ್ಲಿ ಕರ್ನಾಟಕದಲ್ಲಿ ನಿರಂತರ ಮಳೆ !

by ಹೊಸಕನ್ನಡ
0 comments
Weather updates

Weather updates: ತಿರುವನಂತಪುರ: ಇಂದು (ಗುರುವಾರ, ಜೂನ್ 7) ಮಾನ್ಸೂನ್ ಮಾರುತಗಳು ಬಲಗಾಲಿಟ್ಟು ಕೇರಳದ ನೆಲವನ್ನು ಸ್ಪರ್ಶಿಸಿವೆ. ಕೇರಳದಲ್ಲಿ ಇವತ್ತಿನಿಂದ ಅಧಿಕೃತವಾಗಿ ಮಳೆಗಾಲ ಪ್ರಾರಂಭವಾಗಿದೆ. ಕೇರಳಕ್ಕೆ ಮಾನ್ಸೂನ್ ಆಗಮನವಾಗಿದೆ ಎಂದು ಭಾರತೀಯ ಹವಾಮಾನ (Weather updates)  ಇಲಾಖೆ ಈಗ ಸ್ಪಷ್ಟಪಡಿಸಿದೆ.

ಪ್ರತಿ ವರ್ಷ ಸರಿಸುಮಾರು ಜೂನ್ 1 ರಂದು ಕೇರಳಕ್ಕೆ ಮುಂಗಾರು ಆಗಮಿಸುತ್ತಿದ್ದು, ಅದು ಕರ್ನಾಟಕದ ದಕ್ಷಿಣ ಕನ್ನಡಕ್ಕೆ ತಲುಪಲು 5- 7 ದಿನಗಳನ್ನು ತೆಗೆದುಕೊಳ್ಳುತ್ತದೆ. ಈ ವರ್ಷ 7 ದಿನ ತಡವಾಗಿ ಕೇರಳಕ್ಕೆ ಮುಂಗಾರು ಆಗಮಿಸಿದೆ. ಹಾಗಾಗಿ 14 ನೆಯ ತಾರೀಖು ಕರ್ನಾಟಕಕ್ಕೆ ಮಾನ್ಸೂನ್ ಎಂಟ್ರಿ ಆಗಲಿದೆ.

ಕೇರಳದಲ್ಲಿ ಇಂದು ಬೆಳಗ್ಗೆಯಿಂದಲೇ ಎಲ್ಲಾ ಭಾಗಗಳಲ್ಲಿ ಮಳೆ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ ಕೇರಳದಲ್ಲಿ ವ್ಯಾಪಕ ಮಳೆಯಾಗಿದೆ. ಈ ಪರಿಸ್ಥಿತಿಗಳನ್ನು ಪರಿಗಣಿಸಿ, ನೈಋತ್ಯ ಮಾನ್ಸೂನ್ ಕೇರಳಕ್ಕೆ ಕಾಲಿಟ್ಟಿದೆ ಎಂದು ಹೇಳಬಹುದು ಭಾರತೀಯ ಹವಾಮಾನ ಸಂಸ್ಥೆ ಹೇಳಿದೆ. ಹೀಗಾಗಿ ಮುಂದಿನ 48 ಗಂಟೆಗಳಲ್ಲಿ ಮಧ್ಯ ಅರೇಬಿಯನ್ ಸಮುದ್ರ, ಕರ್ನಾಟಕ, ತಮಿಳುನಾಡು, ಬಂಗಾಳ ಕೊಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹಾಗಾಗಿ ಕರ್ನಾಟಕವು ತನ್ನ ಬಹುಪಾಲು ಜೀವಜಲವನ್ನು ಕೊಡಮಾಡುವ ಮುಂಗಾರು ಮಳೆಯ ಸಕಾಲದ ನಿರೀಕ್ಷೆಯಲ್ಲಿದೆ. ಒಟ್ಟು ಕೃಷಿಯ ಅರ್ಧಕ್ಕರ್ಧ ಭಾಗಕ್ಕೆ ಮೇಲೆಯೇ ಆಧಾರ. ಅದರಲ್ಲೂ 40 % ಕೃಷಿ ಮುಂಗಾರು ಮಳೆಯಿಂದಲೇ ಪೋಷಿಸಲ್ಪಡುತ್ತದೆ.

ಈಗಾಗಲೇ ಮಳೆಗಾಲದ ನಿರೀಕ್ಷೆಯಲ್ಲಿರುವ ಕರ್ನಾಟಕದ ರೈತಾಪಿ ವರ್ಗ ತಮ್ಮದೇ ಆದ ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಗದ್ದೆಯ ಬಿತ್ತನೆಗೆ, ಉಳುಮೆಗೆ ಮತ್ತು ತೋಟದ ಆರಂಭಿಕ ಕೆಲಸಕಾರ್ಯಗಳು ಭರದಿಂದ ಸಾಗುತ್ತಿವೆ. ಕರಾವಳಿಯ ಅಡಿಕೆ ಕೃಷಿ ಬೆಳೆಗಾರರು ಕೆಲವು ಕಡೆಗಳಲ್ಲಿ ಅಡಿಕೆ ಗೊನೆ ರೋಗಗಳಿಗೆ ಬೋರ್ಡೋ ದ್ರಾವಣ ಸಿಂಪಡಿಸಲಾಗುತ್ತಿದೆ. ಸೌದೆ-ಸದೆ ಒಟ್ಟುವಿಕೆ ಕಾರ್ಯ ಮುಕ್ತಾಯದ ಹಂತದಲ್ಲಿದೆ. ತಡವಾಗಿಯಾದರೂ ಬರುತ್ತಿರುವ ಮುಂಗಾರು ಮಾರುತಗಳಿಗೆ ಒಟ್ಟಾರೆ ಜೀವ ಸಂಕುಲಗಳು ಜೀವ ಕೈಯಲ್ಲಿ ಹಿಡಿದು ಕಾಯುತ್ತಿವೆ.

ಕರ್ನಾಟಕವೂ ಸೇರದಂತೆ ಅನೇಕ ರಾಜ್ಯಗಳ ಆಡಳಿತವು ಮುಂಗಾರು ಎದುರಿಸಲು ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಕರ್ನಾಟಕದ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಗುರುವಾರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಅಲ್ಲದೇ, ಬೆಂಗಳೂರಿನ ಒಳಚರಂಡಿ ವ್ಯವಸ್ಥೆಯ ಪರಿಶೀಲನೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಅಂಡರ್ ಪಾಸ್ ನಲ್ಲಿ ಕಾರ ಒಂದು ಹುಡುಗಿ ಯುವತಿಯೊಬ್ಬಳು ಮೃತಪಟ್ಟ ಹಿನ್ನೆಲೆಯಲ್ಲಿ ಹೆಚ್ಚಿನಮಟ್ಟಿನ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ.

ಇಲ್ಲಿಯ ತನಕ 110 ಮಿ.ಮೀ. ಮಳೆ ಕಡಿಮೆ:

ಇಂದಿನ ವಾಡಿಕೆಯಂತೆ ಈ ಬಾರಿ ಮಳೆ ಕಡಿಮೆಯಾಗಿದ್ದು, ಇದು ಜೂನ್‌ ತಿಂಗಳಿಗೂ ಇದೇ ಕೊರತೆ ಮುಂದುವರೆಯುವ ಸಾಧ್ಯತೆಗಳಿವೆ. 2022 ಮಾರ್ಚ್‌ನಲ್ಲಿ 30.1 ಮಿ.ಮೀ ಮಳೆಯಾಗಿದ್ದರೆ ಈ ಬಾರಿಯ ಮಾರ್ಚ್ ನಲ್ಲಿ ಕೇವಲ15.7 ಮಿಲಿ ಲೀಟರ್ ರಷ್ಟು ಮಳೆಯಾಗಿದೆ. ಕಳೆದ ವರ್ಷದ ಏಪ್ರಿಲ್‌ನಲ್ಲಿ 71.6 ರಷ್ಟು ಮಳೆಯಾಗಿದ್ದರೆ, ಈ ಬಾರಿ 33.7 ರಷ್ಟು.ಮಾತ್ರ ಮಳೆ ಸುರಿದಿದೆ. ಕಳೆದ ವರ್ಷದ ಮೇ ತಿಂಗಳಿ ನಲ್ಲಿ 251.6 ಮಿ.ಮೀ. ಮಳೆಯಾಗಿದ್ದು, ಈ ಬಾರಿ 155.7 ಮಿ.ಮೀ. ಮಳೆಗೆ ಸೀಮಿತವಾಗಿದೆ. ಒಟ್ಟಿನಲ್ಲಿ ಕಳೆದ ವರ್ಷ 383.5 ಮಿಲಿ ಲೀಟರ್ ರಷ್ಟು ಮಳೆಯಾಗಿದ್ದರೆ, ಈ ಬಾರಿ 220 ಮಿ.ಮೀ.ನಷ್ಟು.ಮಾತ್ರ ಆಗಿ 110 ಮಿಲಿ ಲೀಟರ್ ಮಳೆಯ ಕೊರತೆ ಉಂಟಾಗಿದೆ.

ಮಳೆಗಾಲದ ಮುಂಚಿತವಾಗಿ ಮುಂದಿನ 24 ಗಂಟೆಗಳಲ್ಲಿ ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಬೀಸುವ.ಮಾಹಿತಿ ನೀಡಿದೆ ಹವಾಮಾನ ಇಲಾಖೆ. ಬೀಸುವ ಗಾಳಿಯ ವೇಗವು ಗಂಟೆಗೆ 35-45 ಕಿ.ಮೀ ರಿಂದ 55 ಕಿ.ಮೀ ಇರುವ ಸಾಧ್ಯತೆ ಇದೆ. ಕರಾವಳಿಯ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಕಟ್ಟಪ್ಪಣೆ ವಿಧಿಸಲಾಗಿದೆ. ಸಿಡಿಲು ಗುಡುಗು ಮಿಂಚು ಕೂಡಾ ಇರಲಿದ್ದು, ಜನರು ಹೆಚ್ಚಿನ ರೀತಿಯಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಒಂಟಿಯಾಗಿ ಬಯಲಿನಲ್ಲಿ ನಿಲ್ಲುವುದು, ಒಂಟಿ ಮರದ ಕೆಳಗೆ ಒಂಟಿ ತೆಂಗಿನ ಗಿಡದ ಕೆಳಗೆ, ಎತ್ತರದ ಗುಡ್ಡದ ಮೇಲೆ ಅಥವಾ ಮನೆಯ ಮಹಡಿಯ ಮೇಲೆ, ಟೆರೇಸಿನ ಮೇಲೆ ನಿಲ್ಲುವುದು ಅಥವಾ ಕೆಲಸ ಮಾಡುವುದನ್ನು ಯಾವತ್ತೂ ಮಾಡಬೇಡಿ. ದೇಶಗಳು ಇದ್ದು ಅದರಿಂದ ದೂರವಿರಿ.

 

ಇದನ್ನು ಓದಿ: Yashika anand: ತನಗಿಂತಲೂ 22 ವರ್ಷ ಹಿರಿಯ ನಟನೊಂದಿಗೆ ಕಾಲಿವುಡ್ ಬ್ಯೂಟಿ ಯಶಿಕಾ ಡೇಟಿಂಗ್!! ಯಾರು ಆ ಅದೃಷ್ಟವಂತ? 

You may also like

Leave a Comment