Mallapuram: ಮಗು ಜನಿಸದ ನಂತರ ಹಲವು ಚುಚ್ಚುಮದ್ದುಗಳನ್ನು ನೀಡಲಾಗುತ್ತದೆ. ಇದೆಲ್ಲವೂ ಮಗುವಿಗೆ ಬರುವ ಹಲವು ಮಾರಕ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಆದರೆ ಕೇರಳದಲ್ಲಿ ಸುಶಿಕ್ಷಿತ ದಂಪತಿಯೇ ಈ ಔಷಧಿಗಳನ್ನು ತಮ್ಮ ಮಗುವಿಗೆ ನೀಡುವುದಕ್ಕೆ ನಿರಾಕರಿಸಿ ಇದೀಗ ಮಗುವಿನ ಜೀವವನ್ನು ತಮ್ಮ ಕೈಯಾರೆ ತಾವೇ ಕೊಂದ ಘಟನೆ ನಡೆದಿದೆ.
ಒಂದು ವರ್ಷದ ಮಗು ಸಾವಿಗೀಡಾಗಿದ್ದು, ಈ ಘಟನೆ ಕೇರಳದ ಮಲ್ಲಪ್ಪುರಂನಲ್ಲಿ ನಡೆದಿದೆ. ಪೋಷಕರು ಆಧುನಿಕ ಔಷಧಿಯನ್ನು ನಿರಾಕರಿಸಿ ಮಗುವಿಗೆ ಕಾಯಿಲೆಗೆ ಚಿಕಿತ್ಸೆಗೆ ನೀಡಿಲ್ಲ ಎನ್ನುವ ಆರೋಪ ಬಂದ ಹಿನ್ನೆಲೆಯ ಪೊಲೀಸರು ಅಸಹಹ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪೋಷಕರ ನಿರ್ಲಕ್ಷ್ಯದಿಂದ ಸಾವಿಗೀಡಾದ ಮಗು ಇಸೇನ್ ಇರ್ಹಾನ್. ಹೀರಾ ಹರೀರಾ ಮತ್ತು ನವಾಜ್ ಎಂಬುವವರ ಪುತ್ರ ಇವನಾಗಿದ್ದು, ಮಲ್ಲಪುರಂ ಜಿಲ್ಲೆಯ ಕೊಟ್ಟಕ್ಕಲ್ ನಿವಾಸಿಗಳು. ಮಗುವ ಜೂ.27 ರಂದು ಜಾಂಡೀಸ್‌ನಿಂದ ಸಾವಿಗೀಡಾಗಿದೆ. ಮಗುವಿಗೆ ಯಾವುದೇ ಆಧುನಿಕ ಚಿಕಿತ್ಸೆ ನೀಡಲಾಗಿಲ್ಲ ಎಂದು ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.
ಆಧುನಿಕ ವೈದ್ಯ ಪದ್ಧತಿಯನ್ನು ವಿರೋಧಿಸುವ ಪೋಸ್ಟ್‌ಗಳನ್ನು ಈ ಮಗುವಿನ ತಾಯಿ ಹೀರಾ ಹರೀರಾ ಮಾಡಿದ್ದು, ಇದು ಭಾರೀ ಚರ್ಚೆಯಲ್ಲಿದೆ. ಮಗುವಿನ ಪೋಷಕರು ಮಗು ಎದೆಹಾಲು ಸೇವಿಸಿದ ಕೆಲವೇ ಹೊತ್ತಿನಲ್ಲಿ ಸಾವಿಗೀಡಾಗಿದೆ ಎಂದು ಮನೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದಾಗ ಹೇಳಿದ್ದಾರೆ. ಮಗುವಿಗೆ ಯಾವುದೇ ಚುಚ್ಚುಮದ್ದುಗಳನ್ನು ನೀಡಿಲ್ಲ ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.
ಮಗುವಿನ ಅಂತ್ಯಕ್ರಿಯೆ ನಡೆದರೂ ಪೊಲೀಸರು ನಂತರ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಪರೀಕ್ಷೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
