Home » West Bengal: ರೀಲ್ಸ್ ಗಾಗಿ ದಮ್ ಹೊಡೆದ ಹುಡುಗಿ – ಮನೆಗೆ ಬರುತ್ತಿದ್ದಂತೆ ಬೆಲ್ಟ್ ಬಿಚ್ಚಿ ಹಿಗ್ಗಾ ಮುಗ್ಗ ಬಾರಿಸಿದ ಅಪ್ಪ – ವಿಡಿಯೋ ವೈರಲ್

West Bengal: ರೀಲ್ಸ್ ಗಾಗಿ ದಮ್ ಹೊಡೆದ ಹುಡುಗಿ – ಮನೆಗೆ ಬರುತ್ತಿದ್ದಂತೆ ಬೆಲ್ಟ್ ಬಿಚ್ಚಿ ಹಿಗ್ಗಾ ಮುಗ್ಗ ಬಾರಿಸಿದ ಅಪ್ಪ – ವಿಡಿಯೋ ವೈರಲ್

0 comments
West Bengal

West Bengal: ಯುವತಿ ರೀಲ್ಸ್ ಗಾಗಿ ಸಿಗರೇಟ್ ಸೇದಿದ್ದಾಳೆ. ಆ ವಿಡಿಯೋ ವೈರಲ್ ಆಗಿ, ಅದು ಅವಳಪ್ಪನ ಕಣ್ಣಿಗೆ ಬಿದ್ದು, ಮನೆಗೆ ಬರುತ್ತಿದ್ದಂತೆ ಅವರು ಬೆಲ್ಟ್ ಬಿಚ್ಚಿ ಹಿಗ್ಗಾಮುಗ್ಗಾ ಭಾರಿಸಿದ ಘಟನೆಯೊಂದು ನಡೆದಿದೆ. ಇದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್(Vedio Viral) ಆಗಿದೆ.

ಹೌದು, ರೀಲ್ಸ್(Reals), ವಿಡಿಯೋ ಹುಚ್ಚಿರುವ ಇಂದಿನ ಯುವಕ-ಯುವತಿಯರು ಏನು ಬೇಕಾದರೂ ಮಾಡಲು ಹೇಸುವುದಿಲ್ಲ. ಅದು ಪ್ರಾಣಕ್ಕೆ ಕುತ್ತು ತಂದೊಡ್ಡುತ್ತೆ ಎಂದು ಗೊತ್ತಿದ್ದರೂ ಫೇಮಸ್ ಆಗಲು, ಹೆಚ್ಚು ಹೆಚ್ಚು ಲೈಕ್ಸ್ ಪಡೆಯಲು ಯಾವ ಹುಚ್ಚಾಟಕ್ಕೂ ಸಿದ್ದರಿರುತ್ತಾರೆ. ಇದರಿಂದಾಗಿ ಅನೇಕರು ಪ್ರಾಣಕಳೆದುಕೊಂಡಿದ್ದಾರೆ. ಅಲ್ಲದೆ ಇವರು ತಮ್ಮ ಮನೆಯ ಮಾನ, ಮರ್ಯಾದೆಯನ್ನೂ ಲೆಕ್ಕಕ್ಕಿಡದೆ ಏನೇನೋ ಮಾಡುತ್ತಾರೆ. ಅಂತೆಯೇ ಪಶ್ಚಿಮ ಬಂಗಾಳದಲ್ಲಿ (west bengal) ಯುವತಿಯೊಬ್ಬಳು ರೀಲ್ಸ್ ಗಾಗಿ ಸಿಗರೇಟ್ ಸೇದಿದ್ದಾಳೆ. ಆ ವಿಡಿಯೋ ವೈರಲ್ ಆಗಿ, ಅದು ಅವಳಪ್ಪನ ಕಣ್ಣಿಗೆ ಬಿದ್ದು, ಮನಗೆ ಬರುತ್ತಿದ್ದಂತೆ ಅವರು ಬೆಲ್ಟ್ ಬಿಚ್ಚಿ ಹಿಗ್ಗಾಮುಗ್ಗಾ ಭಾರಿಸಿದ ಘಟನೆಯೊಂದು ನಡೆದಿದೆ. ಇದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ನೋಡುಗರಿಗೆ ಮನರಂಜನೆಯಾಗಿದೆ.

ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ ಶೋನಿಕಪೂರ್ ಹಂಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral Video) ಆಗಿದೆ. ಇದರಲ್ಲಿ ಅಪ್ರಾಪ್ತ ಯುವತಿಯೊಬ್ಬಳು ರೀಲ್ಸ್ ಗಾಗಿ ಬೀದಿಯಲ್ಲಿ ಧೂಮಪಾನ ಮಾಡುತ್ತಿರುವ ವಿಡಿಯೋ ಮಾಡೋದನ್ನು ಕಾಣಬಹುದು. ಬಳಿಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ (Viral Video) ಹಾಕಿದ್ದು ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಅದು ಅವರ ಮನೆಯವರ ಕಣ್ಣಿಗೂ ಬಿದ್ದಿತ್ತು. ಇದರಿಂದ ರೊಚ್ಚಿಗೆದ್ದ ಆಕೆಯ ಅಪ್ಪ, ಮಗಳು ಮನೆಗೆ ಬರುತ್ತಿದ್ದಂತೆ ಬೆಲ್ಟ್ ಬಿಚ್ಚಿ ಸರಿಯಾಗಿ ಜಾಡಿಸಿದ್ದಾರೆ.

ಈ ಘಟನೆಯು ಯುವ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಒಂದು ಎಚ್ಚರಿಕೆಯ ಕಥೆಯಾಗಿದೆ. ರೀಲ್ಸ್ ಗಾಗಿ ನಾವು ಮಾಡುವ ಸ್ಟಂಟ್ ಗಳು ಮನೆಯವರಿಗೆ ಕೆಟ್ಟ ಹೆಸರು ತರಬಹುದು ಅಥವಾ ಅವರಿಗೆ ಮುಜುಗರ ಉಂಟು ಮಾಡಬಹುದು ಎನ್ನುವ ಯೋಚನೆ ನಮ್ಮಲ್ಲಿ ಇರಬೇಕು. ಎಲ್ಲದರಲ್ಲೂ ತೊಡಗಿಸಿಕೊಳ್ಳುವ, ಆದರೆ ಅದು ಮಿತಿ ಮೀರಬಾರದು. ನಮ್ಮ ಹುಚ್ಚಾಟದಿಂದ ಮನೆಯವರಿಗೆ ಯಾವುದೇ ರೀತಿ ತೊಂದರೆಯಾಗಬಾರದು ಎಂಬ ಆಲೋಯೋಚನೆ ಕೂಡ ನಮ್ಮಲ್ಲಿರಬೇಕು.

Harshika Poonacha And Bhuvan: ವಿಭಿನ್ನ ಫೋಟೋ ಶೂಟ್ ಮೂಲಕ ಸಿಹಿ ಸುದ್ದಿ ಕೊಟ್ಟ ಹರ್ಷಿಕಾ – ಭುವನ್!

You may also like

Leave a Comment