Home » Kolkata: ಪಶ್ಚಿಮ ಬಂಗಾಳ: ಮೊಬೈಲ್‌ ಕದ್ದ ಶಂಕೆ: ಬಾಲಕನನ್ನು ಉಲ್ಟಾ ನೇತು ಹಾಕಿ ಕರೆಂಟ್‌ ಶಾಕ್‌

Kolkata: ಪಶ್ಚಿಮ ಬಂಗಾಳ: ಮೊಬೈಲ್‌ ಕದ್ದ ಶಂಕೆ: ಬಾಲಕನನ್ನು ಉಲ್ಟಾ ನೇತು ಹಾಕಿ ಕರೆಂಟ್‌ ಶಾಕ್‌

by Mallika
0 comments

Kolkata: ಮಾಲೀಕರ ಮೊಬೈಲ್‌ ಕಳ್ಳತನದ ಅನುಮಾನದ ಮೇರೆಗೆ 14 ವರ್ಷದ ಬಾಲಕನನ್ನು ಉಲ್ಟಾ ನೇತು ಹಾಕಿ ವಿದ್ಯುತ್‌ ಶಾಕ್‌ ನೀಡಿದ ಘಟನೆ ನಡೆದಿದೆ. ಪಶ್ಚಿಮ ಬಂಗಾಳದ ಮಹೇಶತಲಾದಲ್ಲಿ ಈ ಘಟನೆ ನಡೆದಿದೆ. ಬಾಲಕನನ್ನು ಮೊಬೈಲ್‌ ಕದ್ದ ಅನುಮಾನದ ಮೇರೆಗೆ ಕ್ರೂರವಾಗಿ ತಳಿಸಿದ್ದು ಮಾತ್ರವಲ್ಲದೇ ವಿದ್ಯುತ್‌ ಶಾಕ್‌ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಬಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಾಲಕನ ಕುಟುಂಬದವರು ಕಳ್ಳತನದ ಆರೋಫವನ್ನು ನಿರಾಕರಿಸಿದ್ದು, ಆತ ಯಾವುದೇ ಮೊಬೈಲ್‌ ಕದ್ದಿಲ್ಲ. ಸುಳ್ಳು ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ. ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲು ಮಾಡಲಾಗಿದೆ.

You may also like