Home » Credit card: ಕ್ರೆಡಿಟ್ ಕಾರ್ಡ್ ರದ್ದುಗೊಳಿಸಿದರೆ ಪರಿಣಾಮಗಳೇನು?

Credit card: ಕ್ರೆಡಿಟ್ ಕಾರ್ಡ್ ರದ್ದುಗೊಳಿಸಿದರೆ ಪರಿಣಾಮಗಳೇನು?

0 comments

Credit card: ಕೆಲವರು ಕ್ರೆಡಿಟ್ ಕಾರ್ಡ್ (credit card) ಅನ್ನು ರದ್ದುಗೊಳಿಸಲು ಮುಂದಾಗಬಹುದು. ಕಾರ್ಡ್ ರದ್ದುಗೊಳಿಸಿದರೆ ಯಾವ ಪರಿಣಾಮ ಉಂಟಾಗುತ್ತದೆ?ವಸ್ತುಸ್ಥಿತಿ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕ್ರೆಡಿಟ್ ಕಾರ್ಡ್ ನಿಲ್ಲಿಸುವುದು ನಿಮ್ಮ ಕ್ರೆಡಿಟ್ ಬಳಕೆ ಅನುಪಾತವನ್ನು ಹೆಚ್ಚಿಸುವ ಸಾಧ್ಯತೆ ಇರುತ್ತದೆ. ನಿಮ್ಮ ಕ್ರೆಡಿಟ್ ಹಿಸ್ಟರಿಯನ್ನು ಕಡಿಮೆಗೊಳಿಸಬಹುದು. ಸಾಲದ ವೈವಿಧ್ಯತೆಯನ್ನು ತಗ್ಗಿಸಬಹುದು.

ಕ್ರೆಡಿಟ್ ಸ್ಕೋರ್ ಕಡಿಮೆಯಾಗುವ ಸಾಧ್ಯತೆ ಹೇಗೆ?

ನಿಮ್ಮ ಬಳಿ ಮೂರು ಕ್ರೆಡಿಟ್ ಕಾರ್ಡ್​ಗಳಿವೆ ಎಂದಿಟ್ಟುಕೊಳ್ಳಿ. ಇದರಲ್ಲಿ ಕ್ರಮವಾಗಿ 20,000 ರೂ, 10,000 ರೂ ಮತ್ತು 20,000 ರೂ ಹೀಗೆ ಒಟ್ಟು 50,000 ರೂ ಕ್ರೆಡಿಟ್ ಮಿತಿಯನ್ನು ಈ ಕಾರ್ಡ್​ಗಳು ಹೊಂದಿರುತ್ತವೆ ಎಂದುಕೊಳ್ಳೋಣ. ಈ ಮೂರು ಕಾರ್ಡ್​ಗಳಿಂದ ಸೇರಿ ತಿಂಗಳಿಗೆ 25,000 ರೂ ಮೊತ್ತದಷ್ಟು ಶಾಪಿಂಗ್ ಮಾಡುತ್ತೀರಿ. ನಿಮ್ಮ ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಅಥವಾ ಕ್ರೆಡಿಟ್ ಬಳಕೆ ಅನುಪಾತ ಶೇ. 50 ಇರುತ್ತದೆ.

ಈಗ ನೀವು 20,000 ರೂ ಕ್ರೆಡಿಟ್ ಮಿತಿ ಇರುವ ಕಾರ್ಡ್ ರದ್ದು ಮಾಡಿದಾಗ ನಿಮ್ಮ ಉಳಿದ ಎರಡು ಕಾರ್ಡ್​ಗಳಿಂದ ಇರುವ ಕ್ರೆಡಿಟ್ ಮಿತಿ 30,000 ರೂ ಮಾತ್ರವೇ. ಈಗ ನೀವು ಆ ಎರಡು ಕಾರ್ಡ್ ಬಳಸಿ 25,000 ರೂ ಶಾಪಿಂಗ್ ಮಾಡಿದಾಗ, ನಿಮ್ಮ ಕ್ರೆಡಿಟ್ ಬಳಕೆ ಅನುಪಾತ ಶೇ. 80 ಅನ್ನು ಮೀರಿ ಹೋಗುತ್ತದೆ.

ಸಾಮಾನ್ಯವಾಗಿ, ಕ್ರೆಡಿಟ್ ಯುಟಿಲೈಸೇಶನ್ ರೇಶಿಯೋ ಹೆಚ್ಚು ಇದ್ದಷ್ಟೂ ಕ್ರೆಡಿಟ್ ಸ್ಕೋರ್​ಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು. ಹೀಗಾಗಿ, ಯಾವುದೇ ಕ್ರೆಡಿಟ್ ಕಾರ್ಡ್ ರದ್ದುಗೊಳಿಸುವ ಮುನ್ನ ಈ ಅಂಶ ಪರಿಗಣಿಸಬೇಕು.

ಕ್ರೆಡಿಟ್ ಕಾರ್ಡ್ ಮುಚ್ಚುವ ಮುನ್ನ ಯಾವುದೇ ಬಾಕಿ ಬಿಲ್ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ಒಮ್ಮೆಗೇ ಒಂದಕ್ಕಿಂತ ಹೆಚ್ಚು ಕಾರ್ಡ್​ಗಳನ್ನು ಮುಚ್ಚಬೇಡಿ

ಹಳೆಯ ಕಾರ್ಡ್​ಗಳನ್ನು ಸಕ್ರಿಯವಾಗಿರಿಸಿಕೊಳ್ಳಲು ಯತ್ನಿಸಿ.

ದುಬಾರಿ ವಾರ್ಷಿಕ ಶುಲ್ಕ ಇರುವ ಪ್ರೀಮಿಯಮ್ ಕಾರ್ಡ್​ಗಳು ನಿಮಗೆ ನಿರುಪಯುಕ್ತ ಎನಿಸಿದಲ್ಲಿ ಮುಚ್ಚಬಹುದು.

ತುಂಬಾ ಹೆಚ್ಚು ಸಂಖ್ಯೆಯಲ್ಲಿ ಕಾರ್ಡ್​ಗಳಿದ್ದರೆ ಕೆಲವನ್ನು ಮುಚ್ಚಬಹುದು.

You may also like