D K Shivkumar : ಹಿಂದುತ್ವದ ಫೈಯರ್ ಬ್ರಾಂಡ್, ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಬಿಜೆಪಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ರಾಜ್ಯಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೆಲ ನಾಯಕರು ಈ ಬೆಳವಣಿಗೆಯ ಕುರಿತು ಅಚ್ಚರಿಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅಂತೀಯ ಇದೀಗ ಯತ್ನಾಳ್ ಉಚ್ಚಾಟನೆ ಕುರಿತು ಡಿಕೆಶಿ ಪ್ರತಿಕ್ರಿಸಿದ್ದಾರೆ.
ಬಿಜೆಪಿಯಲ್ಲಾದ ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು ಅದು ಅವರ ಪಾರ್ಟಿ ವಿಚಾರ. ಆ ಮುತ್ತುರತ್ನಗಳನ್ನ ಪಾರ್ಟಿಯಲ್ಲಾದ್ರೂ ಇಟ್ಟುಕೊಳ್ಳಲಿ ಹೊರಗೆ ಬೇಕಾದ್ರೂ ಬಿಸಾಕಲಿ ನನಗ್ಯಾಕೆ ಎಂದರು.
ಅಲ್ಲದೆ ಕೆಲವರು ಶೋಭೆಗೆ ಒಂದೊಂದು ಆಭರಣ ಇಟ್ಟುಕೊಳ್ತಾರೆ. ಕೆಲವರು ಕಿವಿಯೋಲೆ ಹಾಕಿಕೊಳ್ತಾರೆ, ಕೆಲವರು ಹಣೆಗೆ ಇಟ್ಟುಕೊಳ್ತಾರೆ, ಕೆಲವರಿಗೆ ಕಾಲಿಗೆ ಗೆಜ್ಜೆ ಬೇಕು.. ಅವರಿಗೆ ಏನೇನು ಬೇಕೋ ಹಾಗೆ ಮಾಡಿದ್ದಾರೆ ಅಷ್ಟೇ. ಅವರ ಪಾರ್ಟಿಯಲ್ಲಿ ಏನಾದ್ರೂ ಮಾಡಿಕೊಳ್ಳಲಿ ನನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದರು.
