Home » Dharmasthala: ಧರ್ಮಸ್ಥಳದ ನಿಗೂಢ ಕೊಲೆಗಳ ಪ್ರಕರಣದ ಎಸ್‌ಐಟಿ ತನಿಖೆಗೆ “ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಹೇಳೋದೇನು”?!

Dharmasthala: ಧರ್ಮಸ್ಥಳದ ನಿಗೂಢ ಕೊಲೆಗಳ ಪ್ರಕರಣದ ಎಸ್‌ಐಟಿ ತನಿಖೆಗೆ “ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಹೇಳೋದೇನು”?!

0 comments

Dharmasthala: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆ ಮತ್ತು ತಲೆಬುರುಡೆ ರಹಸ್ಯ ಬೆನ್ನತ್ತಿದ ಮೇಲೆ, ಇದೀಗ ಸದ್ಯದ ರಾಜಕೀಯ ಪರಿಸ್ಥಿತಿಗಳಲ್ಲಿ ಸಿದ್ದರಾಮಯ್ಯನವರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಎಂದು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಅಭಿಪ್ರಾಯ ಪಟ್ಟಿದೆ.

ತನಿಖೆಗೆ ಆದೇಶ ನೀಡುವುದು, ತನಿಖೆ ನಡೆಸುವುದು ಒಂದು ಕೆಲಸವಾದರೆ, ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಯುವುದು ಕೂಡ ಅಷ್ಟೇ ಮುಖ್ಯ. ಈಗಿನ ಪರಿಸ್ಥಿತಿಗಳಲ್ಲಿ ಈ ಪ್ರಕರಣದಲ್ಲಿ ಅಪಾರ ಪ್ರಭಾವಿಗಳು ಇರುವ ಸಾಧ್ಯತೆ ಇದೆ. ಹಾಗಾಗಿ ಸತ್ತವರಿಗೆ ಮತ್ತು ಸಂತ್ರಸ್ಥರಿಗೆ ನ್ಯಾಯ ದೊರಕಿಸಲು ಸಿದ್ಧರಾಮಯ್ಯನವರು ಖುದ್ದಾಗಿ ಮುತುವರ್ಜಿ ವಹಿಸಿ ತನಿಖೆಯ ಮೇಲುಸ್ತುವಾರಿ ವಹಿಸಬೇಕು.

ಇವತ್ತು ಸರ್ಕಾರ SIT ತನಿಖೆ ನಡೆಸಲು ಮುಂದಾಗಿದೆ ಎಂದರೆ ಅದಕ್ಕೆ ಕಾರಣ ಈಗಷ್ಟೇ ಚಿಗುರೊಡೆದ ಮಾಧ್ಯಮ. ಅಂದ್ರೆ ಸೋಷಿಯಲ್ ಮೀಡಿಯಾಗಳು, ಸೌಜನ್ಯ ಪ್ರಕರಣದ ಮರು ತನಿಖೆ ಮತ್ತು ತಲೆಬುರುಡೆ ರಹಸ್ಯ ಬೆನ್ನತ್ತಿ ಹೋದದ್ದು ರಾಜ್ಯದ ಸಣ್ಣ ಪುಟ್ಟ ಯು ಟ್ಯೂಬ್ ಗಳು ಮತ್ತು ವೆಬ್ ಪತ್ರಿಕೆಗಳು. ಉಳಿದಂತೆ ಬಹು ದೊಡ್ಡ ಹೆಸರಿನ ಸ್ಯಾಟಲೈಟ್ ಟಿವಿಗಳು ಮತ್ತು ಪ್ರಿಂಟ್ ಪತ್ರಿಕೆಗಳು ನೂರಾರು ಸಾವಿನ ಕೇಸಿಗೆ ನ್ಯಾಯ ಕೇಳಲು ಬಂದಿಲ್ಲ ಅನ್ನೋದು ವಿಷಾದನೀಯ.

ಇದೀಗ (ಕೆಪಿಜೆಪಿ) ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಈ ಮೂಲಕ ಈ ಸರ್ಕಾರದ ಮುಖ್ಯಮಂತ್ರಿಗಳು, ಸರ್ಕಾರದ ಇತರ ಮಂತ್ರಿಗಳು ಸಚಿವರು. ಶಾಸಕರು, ಹಾಗೂ ವಿರೋಧ ಪಕ್ಷದ ಎಲ್ಲಾ ಮುಖಂಡರು. ಶಾಸಕರ ಸಹಿತ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ತಮಗೆ ಶ್ರೀ ಕ್ಷೇತ್ರದ ದೈವ. ದೇವರ ಶಾಪ ದೋಷ ತೊಂದರೆಗಳು ತಟ್ಟಿದಂತೆ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು ಆಗ್ರಹಿಸುತ್ತದೆ. ಒಂದು ವೇಳೆ ಇದು ಹೀಗೆಯೇ ಮುಂದುವರಿದಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜ್ಯದ ಇತರ ಪ್ರಗತಿ ಪರ ಹೋರಾಟಗಾರರು, ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಈ ಬಗ್ಗೆ ಮುಂದೆ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸಬೇಕಾಗಿತೆಂದು ಈ ಮೂಲಕ ಕೆಪಿಜೆಪಿ ಪಕ್ಷ ವಿನಂತಿ ಮಾಡಿದೆ.

ಇದನ್ನೂ ಓದಿ: Hyderabad: ಫ್ರಿಡ್ಜ್‌ನಲ್ಲಿಟ್ಟ ಚಿಕನ್‌, ಮಟನ್‌, ಬೋಟಿ ಬಿಸಿ ಮಾಡಿ ತಿಂದು ಓರ್ವ ಸಾವು, ಮೂವರು ಗಂಭೀರ

You may also like